ಬೆಂಗಳೂರು: ಹಿಂದಿ ಭಾಷೆಯ ದಬ್ಬಾಳಿಕೆಯನ್ನು ಕನ್ನಡಿಗರಾದ ನಾವು ಎಂದಿಗೂ ಸಹಿಸಲಾಗದು. ಹಿಂದಿಗೆ ಅಂಕಗಳ ಬದಲಾಗಿ ಗ್ರೇಡಿಂಗ್ ಪದ್ಧತಿ ತಂದಿರುವ ರಾಜ್ಯ ಸರ್ಕಾರದ ಕ್ರಮ ಸರಿಯಾಗಿದೆ. ಇನ್ನು, ಹಿಂದಿ ಭಾಷೆಗೆ ಗ್ರೇಡಿಂಗ್ ಬಂತು ಅಂತಾ ಹಿಂದಿ ಶಿಕ್ಷಕರು ಆತಂಕಗೊಳ್ಳುವ ಅಗತ್ಯವಿಲ್ಲ.
ಏಕೆಂದರೆ, ಶಾಲೆಗಳಲ್ಲಿ ಹಿಂದಿ ಭಾಷೆ ಮತ್ತು ಹಿಂದಿ ಶಿಕ್ಷಕರು ಇದ್ದೇ ಇರುತ್ತಾರೆ.. ಹೀಗಂತ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರದ 'ಹಿಂದಿ ಗ್ರೇಡಿಂಗ್ ಸಿಸ್ಟಂ' ಬಗ್ಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ 'ಪಬ್ಲಿಕ್ ನೆಕ್ಸ್ಟ್'ನೊಂದಿಗೆ ಮಾತನಾಡಿದ ಅವರು, ತಮ್ಮ ನಿಲುವೇನು? ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.
PublicNext
04/04/2026 10:39 pm
LOADING...