ಮದುವೆಯ ಸಂಭ್ರಮದಲ್ಲಿದ್ದ ವಧುವೊಬ್ಬಳು ತನ್ನ ಭಾವಿ ಪತಿಯ ಅತಿರೇಕದ ನಡವಳಿಕೆಯಿಂದಾಗಿ ಮದುವೆಯನ್ನೇ ನಿರಾಕರಿಸಿ ಹೊರಬಂದ ಘಟನೆ ನಡೆದಿದೆ. ಮದುವೆಯ ಸಮಾರಂಭದ ವೇಳೆ ವರನು ಎಲ್ಲರ ಮುಂದೆ ಅಸಭ್ಯವಾಗಿ ನೃತ್ಯ ಮಾಡುತ್ತಿರುವುದನ್ನು ವಧು ಗಮನಿಸಿದ್ದಾಳೆ. ವರನ ಈ ಅಸಂಬದ್ಧ ವರ್ತನೆಯಿಂದ ತೀವ್ರ ಅಸಮಾಧಾನಗೊಂಡ ವಧು ಆತನನ್ನು ಪ್ರಶ್ನಿಸಿದ್ದಾಳೆ.
ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೊನೆಗೆ ವರನ ನಡವಳಿಕೆಯನ್ನು ಸಹಿಸಲಾರದೆ ವಧುವು ಮದುವೆಯನ್ನು ಅರ್ಧಕ್ಕೇ ನಿಲ್ಲಿಸಿ ಅಲ್ಲಿಂದ ನಿರ್ಗಮಿಸುವ ನಿರ್ಧಾರ ಕೈಗೊಂಡಿದ್ದಾಳೆ.
PublicNext
05/04/2026 07:50 am
LOADING...