ಮೂಡಿಗೆರೆ: ದಕ್ಷಿಣ ಕನ್ನಡಕ್ಕೆ ತೆರಳುವ ವೇಳೆ ಕೊಟ್ಟಿಗೆಹಾರದಲ್ಲಿರುವ ತೇಜಸ್ವಿ ಪ್ರತಿಷ್ಠಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿದರು. ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು ಬಳಸುತ್ತಿದ್ದ ಸ್ಕೂಟರ್, ಕ್ಯಾಮರಾ, ಕುರ್ಚಿ ಹಾಗೂ ಕಂಪ್ಯೂಟರ್‌ಗಳನ್ನೊಳಗೊಂಡ ವಿವಿಧ ಪರಿಕರಗಳನ್ನು ವೀಕ್ಷಿಸಿದ ಅವರು ಬೆರಗು ವ್ಯಕ್ತಪಡಿಸಿದರು. ಇದೇ ವೇಳೆ ಪ್ರತಿಷ್ಠಾನದ ಅಭಿವೃದ್ಧಿಯ ನೀಲನಕ್ಷೆಯ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 25 ಕೋಟಿ ರೂಪಾಯಿಗಳಂತೆ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದ್ದು, ಈಗಾಗಲೇ ಕೆಲಸಗಳು ಪ್ರಗತಿಯಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದರು. ಬೆಳೆಗಾರರು ದೀರ್ಘಕಾಲದ ಬೇಡಿಕೆಯಾದ ಶಿಶಿಲಾ-ಬೈರಾಪುರ ರಸ್ತೆ ಯೋಜನೆಯ ಬಗ್ಗೆ ಸಚಿವರ ಗಮನ ಸೆಳೆದಾಗ, ಈ ಪ್ರಸ್ತಾವನೆಯನ್ನು ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದರು. ಕಾಫಿ ಬೆಳೆಗಾರರು ಎದುರಿಸುತ್ತಿರುವ ಆನೆ-ಮಾನವ ಸಂಘರ್ಷದ ಕುರಿತು ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜೈರಾಂ ಪ್ರಸ್ತಾಪಿಸಿದಾಗ, ಅರಣ್ಯ ಸಚಿವರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ವಿಶೇಷ ಸಭೆ ಕರೆಯುವುದಾಗಿ ಸಚಿವರು ತಿಳಿಸಿದರು.
PublicNext
05/04/2026 12:14 pm
LOADING...