ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೃಷಿಕರ ಜೀವನಾಡಿ ಕಂಬಳ ಸಂಸ್ಕೃತಿಯನ್ನು ಉಳಿಸಲು ಯುವಕರು ಮುಂದೆ ಬರಬೇಕು - ಡಿಕೆ ಸುರೇಶ್

ಮಂಗಳೂರು: ಮೂಳೂರು - ಅಡ್ಡರು ಜೋಡುಕೆರೆ ಕಂಬಳ ಸಮಿತಿಯ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ 3ನೇ ವರ್ಷದ ಗುರುಪುರ ಕಂಬಳದ ಸಭಾ ಕಾರ್ಯಕ್ರಮವು ಶನಿವಾರ ರಾತ್ರಿ ಗುರುಪುರ ಮಾಣಿಬೆಟ್ಟು ಗುತ್ತಿನ ಎದುರಿನ ಗದ್ದೆಯಲ್ಲಿ ನಡೆಯಿತು.

ಕಂಬಳದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ಇನಾಯತ್ ಅಲಿ ಅವರು ಜ್ಯಾತ್ಯತೀತದ ಸಂಕೇತ. ಅವರಿಗೆ ಶಕ್ತಿ ನೀಡುವ ಉದ್ದೇಶದಿಂದ ಗುರುಪುರ ಕಂಬಳದಲ್ಲಿ ಭಾಗವಹಿಸಿದ್ದೇನೆ. ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕತೆ ಉಳಿಸುವ ಕೆಲಸ ಇನಾಯತ್ ಅವರಿಂದ ನಡೆಯುತ್ತಿದೆ.

ನಗರೀಕರಣವಾಗುತ್ತಿರುವ ಸಂದರ್ಭದಲ್ಲಿ ಕೃಷಿಕರ ಜೀವನಾಡಿ ಕಂಬಳ ಸಂಸ್ಕೃತಿಯನ್ನು ಉಳಿಸಲು ಯುವಕರು ಮುಂದೆ ಬರಬೇಕು. ಕರಾವಳಿಯಲ್ಲಿ ಕಂಬಳಗಳು ವೈವಿಧ್ಯಮಯವಾಗಿ ನಡೆಯುತ್ತಿದ್ದು, ಇದು ರಾಷ್ಟ್ರಾದ್ಯಂತ ನಡೆಯಲಿ ಎಂದು ಸುರೇಶ್ ಅವರು ಶುಭಹಾರೈಸಿದರು.

Edited By :
PublicNext

PublicNext

05/04/2026 03:05 pm

Cinque Terre

7.28 K

Cinque Terre

0