ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೊಳಲಿ ರಾಜರಾಜೇಶ್ವರಿ ದೇವಾಲಯದಲ್ಲಿ 'ವಸ್ತ್ರಸಂಹಿತೆ' ಜಾರಿಗಾಗಿ ಪಾದಯಾತ್ರೆ

ಮಂಗಳೂರು: ಬಂಟ್ವಾಳ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು. ಬೆಳಿಗ್ಗೆ 5 ಗಂಟೆಗೆ ಕೈಕಂಬ ಪೊಳಲಿ ದ್ವಾರದಿಂದ ಹೊರಟ ಪಾದಯಾತ್ರೆ ಸುಮಾರು 8:30ಕ್ಕೆ ತಲುಪಿತು.

7ನೇ ವರ್ಷದ ಪಾದಯಾತ್ರೆ ಇದಾಗಿದ್ದು, ಸುಮಾರು ಸಾವಿರಕ್ಕೂ ಅಧಿಕ ಜನ ಪಾದಯಾತ್ರೆ ಭಾಗವಹಿಸಿದ್ದರು. ಮುಖ್ಯವಾಗಿ ಪೊಳಲಿ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು, ಗೋಶಾಲೆ ನಿರ್ಮಾಣಮಾಡಲು, ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶಕೊಡದಂತೆ ಉದ್ದೇಶವನ್ನಿಟ್ಟುಕೊಂಡು ಈ ಪಾದಯಾತ್ರೆಯನ್ನು ಮಾಡುತ್ತಿರುವುದು ಉದ್ದೇಶವಾಗಿದೆ.

ಕಳೆದ ಬಿಜೆಪಿ ಸರಕಾರವಿರುವಾಗ ಗೋಶಾಲೆ ನಿರ್ಮಾಣಕ್ಕೆ ಅಸ್ತು ನೀಡಲಾಗಿತ್ತು. ಆದರೆ ಅಷ್ಟರ ಮಟ್ಟಿಗೆ ಫಲಪ್ರದಾಯಕವಾಗಿಲ್ಲ. ವಸ್ತ್ರಸಂಹಿತೆ ಜಾರಿಗಾಗಿ ಸತತ ಏಳು ವರ್ಷದಿಂದ ಪಾದಯಾತ್ರೆಯ ಮೂಲಕ ಬಂದು ಮನವಿ ಮಾಡಿಕೊಂಡು ಬರಲಾಗುತ್ತಿದೆ. ಅದು ಕೂಡ ಇಲ್ಲೀವರೆಗೂ ಜಾರಿಯಾಗಿಲ್ಲ. ಹಾಗಾಗಿ ಈ ಬಾರಿಯಾದರೂ ಪೊಳಲಿಯಲ್ಲಿ ಹಿಂದೂ ಸಂಪ್ರದಾಯಕ್ಕೆ ಒಳಪಟ್ಟಂತೆ ವಸ್ತ್ರಸಂಹಿತೆ ಜಾರಿಯಾಗಬೇಕು ಎಂದು ಪೊಳಲಿ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ನೀಡಲಾಯಿತು.

Edited By :
PublicNext

PublicNext

05/04/2026 04:33 pm

Cinque Terre

4.44 K

Cinque Terre

0