ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಭೀತಿಯಲ್ಲಿ ಬದುಕುವಂತಾಗಿದೆ. ನಿರಂತರವಾಗಿ ಜಮೀನುಗಳಿಗೆ ನುಗ್ಗುತ್ತಿರುವ ಆನೆಗಳು ರೈತರು ಕಷ್ಟಪಟ್ಟು ಬೆಳೆದ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸುತ್ತಿವೆ. ಈ ಆತಂಕದ ನಡುವೆಯೇ ಮುತ್ತೂಡಿ ಅಭಯಾರಣ್ಯದ ಸಮೀಪವಿರುವ ಕೆಸವೆ ಎಂಬಲ್ಲಿ ದೈತ್ಯಾಕಾರದ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ.
ಮುತ್ತೂಡಿ ಅರಣ್ಯ ವ್ಯಾಪ್ತಿಯಲ್ಲಿ ನೂರಾರು ಆನೆಗಳಿದ್ದು, ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಈ ದೈತ್ಯ ಆನೆ ನಾಡಿನತ್ತ ಬಂದಿದೆ ಎನ್ನಲಾಗಿದೆ. ಗಮನಾರ್ಹವಾದ ದೊಡ್ಡ ದಂತಗಳನ್ನು ಹೊಂದಿರುವ ಈ ಆನೆಯು ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.
PublicNext
05/04/2026 04:24 pm
LOADING...