ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಠ ಬಿಡದಿದ್ದರೆ ನರಕ ದರ್ಶನ ಖಚಿತ! ಇರಾನ್‌ಗೆ ಟ್ರಂಪ್ 'ಡೆಡ್‌ಲೈನ್'

ಇರಾನ್‌ಗೆ ಟ್ರಂಪ್ 'ಡೆಡ್‌ಲೈನ್' ಫಿಕ್ಸ್: "ಮಂಗಳವಾರವೇ ಪವರ್ ಪ್ಲಾಂಟ್, ಸೇತುವೆಗಳ ಅಂತ್ಯ; ಹಠ ಬಿಡದಿದ್ದರೆ ನರಕ ದರ್ಶನ ಖಚಿತ!"

ವಾಷಿಂಗ್ಟನ್/ತೆಹ್ರಾನ್: ಇರಾನ್ ವಿರುದ್ಧ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಂತಿಮ ಎಚ್ಚರಿಕೆ ನೀಡಿದ್ದಾರೆ. "ಮಂಗಳವಾರ ಇರಾನ್ ಪಾಲಿಗೆ 'ಪವರ್ ಪ್ಲಾಂಟ್ ಡೇ' ಮತ್ತು 'ಬ್ರಿಡ್ಜ್ ಡೇ' ಆಗಲಿದೆ. ಅಂದು ನಡೆಯುವ ದಾಳಿ ಈ ಹಿಂದೆಂದೂ ಕಂಡಿರದ ಮಟ್ಟದಲ್ಲಿರಲಿದೆ" ಎಂದು ಟ್ರಂಪ್ ಗುಡುಗಿದ್ದಾರೆ.

ಜಾಗತಿಕ ತೈಲ ಮಾರುಕಟ್ಟೆಗೆ ಅತ್ಯಂತ ಪ್ರಮುಖವಾಗಿರುವ 'ಹಾರ್ಮುಜ್ ಜಲಸಂಧಿ'ಯನ್ನು ಕೂಡಲೇ ಮುಕ್ತಗೊಳಿಸುವಂತೆ ಇರಾನ್‌ಗೆ ಟ್ರಂಪ್ ತಾಕೀತು ಮಾಡಿದ್ದಾರೆ.

ಟ್ರಂಪ್ ಅವರ ಹೇಳಿಕೆಯ ಪ್ರಕಾರ, ಇರಾನ್ ತನ್ನ ಹಠಮಾರಿ ಧೋರಣೆ ಮುಂದುವರಿಸಿದರೆ ಮಂಗಳವಾರ ಅಮೆರಿಕದ ವಾಯುಪಡೆ ಇರಾನ್‌ನ ಪ್ರಮುಖ ವಿದ್ಯುತ್ ಸ್ಥಾವರಗಳು (Power Plants) ಮತ್ತು ಸಂಪರ್ಕ ಸೇತುವೆಗಳ ಮೇಲೆ ಸರಣಿ ದಾಳಿ ನಡೆಸುವ ಸಾಧ್ಯತೆಯಿದೆ. ಇರಾನ್‌ನ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಆ ದೇಶವನ್ನು ಕತ್ತಲೆಯಲ್ಲಿ ಮುಳುಗಿಸುವುದು ಅಮೆರಿಕದ ತಂತ್ರ ಎನ್ನಲಾಗುತ್ತಿದೆ.

ಟ್ರಂಪ್ ಅವರ ಈ 'ಓಪನ್ ಥ್ರೆಟ್'ನಿಂದಾಗಿ ಜಾಗತಿಕ ರಾಜಕೀಯದಲ್ಲಿ ಆತಂಕ ಮನೆಮಾಡಿದೆ. ಈಗಾಗಲೇ ಇರಾನ್ ಗಡಿಯಲ್ಲಿ ಅಮೆರಿಕದ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿದ್ದು, ಮಂಗಳವಾರ ದೊಡ್ಡ ಮಟ್ಟದ ಕ್ಷಿಪಣಿ ದಾಳಿ ನಡೆಯುವ ಭೀತಿ ಎದುರಾಗಿದೆ.

Edited By :
PublicNext

PublicNext

05/04/2026 06:17 pm

Cinque Terre

11.78 K

Cinque Terre

1