ಕಲಘಟಗಿ : ಕಲಘಟಗಿ ತಾಲ್ಲೂಕಿನ ದಾಸ್ತಿಕೋಪ್ಪ ಗ್ರಾಮದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕ್ರೀಡೆಗಾಗಿ ಜಾಗ ಇಲ್ಲದೆ ಇರುವ ಕಾರಣ ಪರದಾಡುವಂತಾಗಿತ್ತು.
ಇದರ ಬಗ್ಗೆ ಕಳೆದ ಒಂದು ವಾರದ ಹಿಂದೆ ದಾಸ್ತಿಕೋಪ್ಪ ಗ್ರಾಮದ ಯುವಕರು ಸಂತೋಷ್ ಲಾಡ್ ಅವರಿಗೆ ಜಾಗ ಸ್ವಚ್ಛತೆಗಾಗಿ ಮನವಿ ಮಾಡಿಕೊಂಡಿದ್ದರು.
ಕೂಡಲೇ ಸ್ಪಂದಿಸಿದ ಕ್ಷೇತ್ರದ ಶಾಸಕರು ಹಾಗೂ ಸಚಿವರು ಆದಂತಹ ಸಂತೋಷ್ ಲಾಡ್ ಜಾಗ ಸ್ವಚ್ಛತೆಗಾಗಿ ಜೇಸಿಬಿ ವಾಹನವನ್ನು ಕಳುಹಿಸಿ ಕೊಟ್ಟಿದ್ದಾರೆ.
ಇಂದು ಮುಂಜಾನೆ ಸ್ಥಳಕ್ಕೆ ಆಗಮಿಸಿದ ಸಂತೋಷ್ ಲಾಡ್ ಆಪ್ತ ಸಹಾಯಕರಾದ ಸೋಮಶೇಖರ್ ಬೆನ್ನೂರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿಯವರು ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಿದರು. ಮನವಿಗೆ ಸ್ಪಂದಿಸಿದ ಸಂತೋಷ್ ಲಾಡ್ ಅವರಿಗೆ ದಾಸ್ತಿಕೋಪ್ಪ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/04/2026 03:40 pm
LOADING...