ಧಾರವಾಡ: ಹುಬ್ಬಳ್ಳಿಯಲ್ಲಿ ಹಿಂದೂ ಯುವತಿಯರ ಮೇಲೆ ನಡೆದ ಲವ್ ಜಿಹಾದ್ ಖಂಡಿಸಿ ಧಾರವಾಡದ ಸುಭಾಷ ರಸ್ತೆಯಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಜನಾಕ್ರೋಶ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಜನಾಕ್ರೋಶ ಪ್ರತಿಭಟನಾ ಸಮಾವೇಶದಲ್ಲಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಂಡಿದ್ದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ತಂದೆ, ತಾಯಿ ತಮ್ಮ ಹೆಣ್ಣು ಮಕ್ಕಳನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ನಾವು ಕುರುಬ, ಬ್ರಾಹ್ಮಣ, ಸಾವಜಿಯವರನ್ನು ಈ ಲವ್ ಜಿಹಾದ್‌ನಿಂದ ಕಳೆದುಕೊಂಡಿದ್ದೇವೆ. ನಾಲ್ಕು ಮದುವೆಯಾಗಿರುವ ಮುಸ್ಲಿಂ ನಮ್ಮ ಹೆಣ್ಣು ಮಕ್ಕಳನ್ನು ಮನೆಯಾಳಿನಂತೆ ಕಾಣುತ್ತಾರೆ. ಅಂತಹ ಹೆಣ್ಣು ಮಕ್ಕಳನ್ನು ವಾಪಸ್ ಕರೆತಂದು ಅವರನ್ನು ಟ್ರೇನ್ ಮಾಡಬೇಕಿದೆ. ಪೊಲೀಸರು ಮಾಡಲಿಲ್ಲ ಎಂದರೆ ನಾವು ಮಾಡುತ್ತೇವೆ ಎಂದು ಧೈರ್ಯದಿಂದ ಹೇಳಿ ಎಂದರು.
ಬೇರೆ ಬೇರೆ ಸಮಾಜದವರೂ ಕೂಡ ನಮ್ಮ ಸಮಾಜ ಕೂಡ ವೋಟ್ ಬ್ಯಾಂಕ್ ಎಂದು ಹೇಳಬೇಕು. ಕೇವಲ ಮುಸ್ಲಿಂ ಸಮಾಜ ಮಾತ್ರ ವೋಟ್ ಬ್ಯಾಂಕ್ ಅಲ್ಲ. ನಮ್ಮ ಸಮಾಜ ಎದ್ದು ನಿಂತರೆ ಕಾಲು ಮುರಿಯುತ್ತೇವೆ ಎಂದು ಹೇಳಬೇಕು. ಯಾವುದೇ ಪಕ್ಷ ಇರಲಿ ಪೊಲೀಸರು, ಚಕ್ರವರ್ತಿ ಸೂಲಿಬೆಲೆ ಹೋದರೆ ಅಥವಾ ಯಾರಾದರೂ ಹೋದರೆ ಏಕವಚನದಲ್ಲಿ ಮಾತನಾಡುತ್ತಾರೆ. ಒಬ್ಬ ಮುಸ್ಲಿಂ ಹೋದರೆ ನೀನು ಹೋಗಪ್ಪ ಎಂದು ಎಫ್ಐಆರ್ ಮಾಡದೇ ಕಳುಹಿಸುತ್ತಾರೆ.
ಹಿಂದುತ್ವದ ಕೆಲಸ ಮಾಡಿ ಜೈಲಿಗೆ ಹೋದವರಿಗೆ ನಾವು ಸನ್ಮಾನ ಮಾಡಬೇಕಿದೆ. ಪಾಪಿಗಳನ್ನು ಹೊಡೆಯುವುದು ಪರಿಹಾರ ಅಲ್ಲ ಎನ್ನುತ್ತಾರೆ. ಹಿಂದೂ ಯುವತಿಯರನ್ನ ಮುಟ್ಟಿದರೆ ಇದಕ್ಕೆ ಈ ಪರಿಹಾರ ಅಲ್ಲ ಎಂದು ಶ್ರೀ ರಾಮನೇ ಹೇಳಿದ್ದಾನೆ. ರಾಮನ ಆದರ್ಶ ನಾವು ಇಟ್ಟುಕೊಳ್ಳದೇ ಇದ್ದರೆ ನಡೆಯುವುದಿಲ್ಲ. ಎರಡು ವರ್ಷದ ನಂತರ ಮತ್ತೆ ಪ್ರತಿಭಟನೆ ಮಾಡಲು ಸಜ್ಜಾಗಬೇಡಿ. ಲವ್ ಜಿಹಾದ್ ಮೂಲಕ ಸಮೀರ್ ಎಂಬಾತ ನಮ್ಮನ್ನು ಜಾಗೃತರನ್ನಾಗಿ ಮಾಡಿದ್ದಾನೆ. ಇಡೀ ರಾಜ್ಯದಲ್ಲಿ ಹುಬ್ಬಳ್ಳಿ - ಧಾರವಾಡ ಲವ್ ಜಿಹಾದ್ ಹಬ್ ಆಗಿವೆ. ಅವರ ಕೈ ನಮ್ಮ ಮನೆಯವರೆಗೆ ಬರುತ್ತದೆ. ಅಜ್ಮೀರ್‌ನಲ್ಲಿ ಯಾವ ರೀತಿ ರೇಪ್ ಪ್ರಕರಣ ಆಯಿತೋ ಅದೇ ರೀತಿ ಹುಬ್ಬಳ್ಳಿ, ಧಾರವಾಡ ಸ್ಥಿತಿ ಇದೆ. ಇದು ಆಕ್ರೋಶದ ಹೊತ್ತು, ನಾವು ಗಂಭೀರವಾಗಿ ಇರಬೇಕು. ಮಾನಸಿಕವಾಗಿ ಗಟ್ಟಿ ಇರಬೇಕು. ನಾವು ಶಿವಾಜಿ ಸಂತಾನ ಎಂದು ಪಡೆ ನಿರ್ಮಾಣ ಮಾಡಬೇಕು. ಪೊಲೀಸರು ತಮಗೆ ಕೊಟ್ಟ ಕೆಲಸ ಮಾಡಲಿಲ್ಲ. ಅದನ್ನು ನಾವು ಮಾಡಬೇಕು. ಇದು ನಿಲ್ಲುವಂತಹ ಹೋರಾಟ ಅಲ್ಲ. ಜಿಹಾದ್‌ನಿಂದ ಮುಕ್ತಿ ಆಗುವವರೆಗೆ ನಾವು ನಿಲ್ಲಬಾರದು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/04/2026 09:42 pm