ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯದಿದ್ರೆ ಉಗ್ರ ಹೋರಾಟ - ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ, ಸಮೀರ್ ಕುಟುಂಬಸ್ಥರಿಂದ 60 ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಆ ಕೇಸ್‌ಗಳನ್ನು ವಾಪಸ್ ಪಡೆಯದಿದ್ರೆ ಹಿಂದೂಪರ ಸಂಘಟನೆಗಳಿಂದ ಹೋರಾಟ ಮಾಡಲಾಗುತ್ತದೆಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರಿಗೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮನವಿ ಸಲ್ಲಿಸಿದರು.

ಸಮೀರ್ ಮುಲ್ಲಾ ಕುಟುಂಬಸ್ಥರು ಮಾಡಿದ ಹಿಂದೂ ಕಾರ್ಯಕರ್ತರ ಮೇಲಿನ ಎಫ್‌ಐಆರ್‌ ರದ್ದು ಮಾಡಬೇಕೆಂದು ಆಗ್ರಹಿಸಿದರು. ನಂತರ ಮಾಧ್ಯಮಕ್ಕೆ ಮಾತನಾಡಿದ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು,

ಸಮೀರ್ ಕುಟುಂಬಸ್ಥರು ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಮಾಡಿದ್ದಾರೆ ಪ್ರಕರಣ ರದ್ದು ಮಾಡಬೇಕು. ಒಂದು ವೇಳೆ ರದ್ದು ಮಾಡದಿದ್ದಲ್ಲಿ ಪ್ರಮೋದ್ ಮುತಾಲಿಕ್‌ರನ್ನು ಎ1ಆರೋಪಿ ಮಾಡಲಿ, ಮೊದಲು ನನ್ನ ಬಂಧನ ಮಾಡಿ ನಂತರ ಉಳಿದವರ ಬಂಧನ ಮಾಡಲು ತಿಳಿಸಿದ್ದೇವೆ ಎಂದರು.

Edited By : Vinayak Patil
Kshetra Samachara

Kshetra Samachara

07/04/2026 07:45 pm

Cinque Terre

6.63 K

Cinque Terre

0

ಸಂಬಂಧಿತ ಸುದ್ದಿ