ಹುಬ್ಬಳ್ಳಿ : ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತ ಯುವತಿ ದೂರು ನೀಡುತ್ತಿದ್ದಂತೆ, ಹಳೇ ವಿಡಿಯೋ ಹೊರಗೆ ಯಾಕೆ ಬರುತ್ತಿವೆ ಇದರ ಅರ್ಥ ಏನು ?. ಆ ಹಳೇ ವಿಡಿಯೋ ಯಾರ ಕಡೆ ಇದೆ. ಕೆಲ ಪುಡಿ ರಾಜಕಾರಣಿಗಳು ಇದರಲ್ಲಿ ಬಿಜೆಪಿ ಕಾಂಗ್ರೆಸ್ ಅಂತ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿದ್ರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೆವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಿಡಿ ಕಾರಿದರು.
ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಇದರಲ್ಲಿ ಬ್ಯಾಲೆನ್ಸ್ ಆಕ್ಟ್ ಮಾಡೋದು ಬೇಡ. ಅನ್ಯಾಯ ಮಾಡಿದರವನ್ನು ಹಿಡಿದು ಒದ್ದು ಒಳಗೆ ಹಾಕಬೇಕು. ಸಣ್ಣ ಸಣ್ಣ ಹುಡುಗಿಯರ ಇಟ್ಟುಕೊಂಡು ನಾವೇಯಾಕೆ ರಾಜಕೀಯ ಮಾಡಬೇಕು. ಸಮೀರ್ ನನ್ನು ಹಿಡಿದು ಕೊಟ್ಟಿದ್ದಕ್ಕೆ ಹಿಂದೂ ಪರ ಸಂಘಟನೆ ಮೇಲೆ ಯಾಕೆ ಪ್ರಕರಣ ದಾಖಲು ಮಾಡಿದ್ದಿರಿ, ಹುಬ್ಬಳ್ಳಿ ಹೋರಾಟದ ಭೂಮಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/04/2026 08:24 pm
LOADING...