ಅಹಮದಾಬಾದ್‌ನಲ್ಲಿ ಹೃದಯ ಕಲುಕುವ ಘಟನೊಂದು ಬೆಳಕಿಗೆ ಬಂದಿದೆ. ಮಾರುಕಟ್ಟೆಯಿಂದ ಖರೀದಿಸಿದ ರೆಡಿಮೇಡ್ ದೋಸೆ ಹಿಟ್ಟಿನಿಂದ ತಯಾರಿಸಿದ ಆಹಾರವೇ ಒಂದು ಕುಟುಂಬದ ಮೇಲೆ ಭೀಕರ ಪರಿಣಾಮ ಬೀರಿದೆ. ಮೂರು ತಿಂಗಳ ಕಂದಮ್ಮ ರಾಹಾ ಮತ್ತು ನಾಲ್ಕು ವರ್ಷದ ಮಗು ಮಿಶ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ತಂದೆ-ತಾಯಿ ಜೀವ-ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಚಾಂದ್‌ಖೇಡಾ ನಿವಾಸಿಗಳಾದ ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ದಂಪತಿಗಳು ಸ್ಥಳೀಯ ಡೈರಿಯಿಂದ ಹಿಟ್ಟು ತಂದಿದ್ದರು. ಅದನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ಇಡೀ ಕುಟುಂಬ ತೀವ್ರ ವಾಂತಿ, ಅಸ್ವಸ್ಥತೆಯಿಂದ ಕುಸಿದಿದೆ. ವಿಷಾಹಾರದ ಶಂಕೆ ಗಟ್ಟಿಯಾಗಿದ್ದು, ತಾಯಿ ಮೂಲಕ ಮಗುವಿಗೆ ಪರಿಣಾಮ ಬೀರಿದಿರಬಹುದೆಂಬ ಅನುಮಾನ ಕೂಡ ಕೇಳಿಬರುತ್ತಿದೆ.
ಘಟನೆಯ ನಂತರ ಕುಟುಂಬದವರು ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ. “ಈ ಹಿಟ್ಟೇ ನಮ್ಮ ಮಕ್ಕಳ ಪ್ರಾಣ ಕಸಿದುಕೊಂಡಿದೆ” ಎಂದು ಆರೋಪಿಸುತ್ತಿದ್ದಾರೆ. ಆದರೆ ಡೈರಿ ಮಾಲೀಕರು ಆರೋಪಗಳನ್ನು ತಳ್ಳಿಹಾಕಿ, ಅದೇ ಹಿಟ್ಟನ್ನು ನೂರಾರು ಜನ ಬಳಸಿದ್ದಾರೆ ಎಂದು ಹೇಳುತ್ತಿದ್ದಾರೆ.
ಇದೀಗ ಪೊಲೀಸರು ಹಾಗೂ ಆಹಾರ ಇಲಾಖೆ ತನಿಖೆ ಕೈಗೊಂಡಿದ್ದು, ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿ ಬಂದ ಬಳಿಕವೇ ನಿಜಾಂಶ ಬಹಿರಂಗವಾಗಲಿದೆ. ಈ ದುರ್ಘಟನೆ ಆಹಾರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
PublicNext
07/04/2026 07:28 am
LOADING...