ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಸವ ವನದಲ್ಲಿಲ್ಲ ಬಸವ ಜಯಂತಿ ಆಚರಣೆ : ಆಡಳಿತದ ಮೌನಕ್ಕೆ ಸಾರ್ವಜನಿಕ ಆಕ್ರೋಶ

ಹುಬ್ಬಳ್ಳಿ: ಅಂತೂ ಇಂತೂ ಹುಬ್ಬಳ್ಳಿಯ ಪ್ಲೈಓವರ್ ಕಾಮಗಾರಿ ಮುಗಿಯುತ್ತ ಬಂದಿದೆ. ಕಾಮಗಾರಿ ಆರಂಭದ ವೇಳೆಯಲ್ಲಿ ಸ್ಥಳಾಂತರ ಮಾಡಿದ್ದ ಬಸವವನದ ಬಸವೇಶ್ವರರ ಪುತ್ಥಳಿಯನ್ನು ಬಸವಜಯಂತಿ ಬಂದರೂ, ಪ್ರತಿಷ್ಠಾಪನೆಗೆ ಚಿಂತನೆ ನಡೆಸಿಲ್ಲ.

ಹೌದು.. 2023ರ ಜನವರಿಯಲ್ಲಿಯೇ ಬಸವ ವನದಲ್ಲಿದ್ದ ಬಸವೇಶ್ವರರ ಪುತ್ಥಳಿಯನ್ನು ಸ್ಥಳಾಂತರ ಮಾಡಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಗೆ ಪುನರ್ ಸ್ಥಾಪನೆ ಮಾಡಲಾಗಿತ್ತು. ಆದರೆ ಬಸವವನದಲ್ಲಿ ಬಹುತೇಕ ಪ್ಲೈಓವರ್ ಕಾಮಗಾರಿ ಮುಗಿಯುತ್ತ ಬಂದಿದೆ. ಅಲ್ಲದೇ ಇದೇ 20ರಂದು ಬಸವ ಜಯಂತಿ ಸಮೀಪಿಸುತ್ತಿದ್ದರೂ, ಕೂಡ ಈ ಬಗ್ಗೆ ಚಿಂತನೆ ನಡೆಸದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.

ಸ್ಥಳಾಂತರ ಪೂರ್ವದಲ್ಲಿ ಬಸವ ಸಮಿತಿಯು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಜನಪ್ರತಿನಿಧಿಗಳು, ಗುತ್ತಿಗೆ ಪಡೆದಿದ್ದ ಕಂಪನಿಯು ಷರತ್ತುಗಳಿಗೆ ಒಪ್ಪಿಕೊಂಡು ಸ್ಥಳಾಂತರ ಮಾಡಿತ್ತು. ಆದರೆ ಸುಮಾರು ಮೂರು ವರ್ಷಗಳಿಂದ ಇದುವರೆಗೂ ಮರು ಸ್ಥಾಪನೆಯ ಬಗ್ಗೆ ಚಕಾರ ಎತ್ತಿಲ್ಲ. ಅಲ್ಲದೇ ಬಸವ ಜಯಂತಿ ಸಮೀಪಿಸುತ್ತಿದ್ದರೂ, ಇದುವರೆಗೂ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಪ್ಲೈಓವರ್ ಕಾಮಗಾರಿ ಆರಂಭದಿಂದಲೂ, ಟೈಮ್ ಬಾಂಡ್ ಹಾಗೂ ಕೊಟ್ಟ ಮಾತನ್ನು ತಪ್ಪುತ್ತಲೇ ಬಂದಿದೆ. ಬಸವ ಜಯಂತಿ ಸಮೀಪಿಸುತ್ತಿದ್ದರೂ, ಈ ಬಗ್ಗೆ ಕಾಳಜಿ ವಹಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/04/2026 08:53 pm

Cinque Terre

12.55 K

Cinque Terre

0

ಸಂಬಂಧಿತ ಸುದ್ದಿ