ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎಲ್&ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್

ಧಾರವಾಡ: ಕುಡಿಯುವ ನೀರಿಗಾಗಿ ಧಾರವಾಡ ಕುಮಾರೇಶ್ವನಗರದ ನಿವಾಸಿಗಳು ಎಲ್ ಆ್ಯಂಡ್ ಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಎಲ್&ಟಿ ಅಧಿಕಾರಿಗಳನ್ನು ತಮ್ಮ ಕಚೇರಿಗೆ ಕರೆಯಿಸಿಕೊಂಡ ಮೇಯರ್ ಜ್ಯೋತಿ ಪಾಟೀಲ ಕುಮಾರೇಶ್ವರನಗರದ ನಿವಾಸಿಗಳ ಎದುರೇ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪ್ರತಿದಿನ ಒಂದೊಂದು ಏರಿಯಾ ಜನ ಎಲ್&ಟಿ ಕಚೇರಿ ಎದುರು ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ನೀವು ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರತಿನಿತ್ಯ ಜನ ಕೊಡಗಳನ್ನು ಹಿಡಿದು ನೀರಿಗಾಗಿ ನಿಲ್ಲುವಂತಾಗಿದೆ. ನಿಮಗೆ ಎಲ್ಲಾ ರೀತಿಯಿಂದಲೂ ಪರವಾನಗಿ ಕೊಡಿಸಲಾಗಿದೆ. ಒಂದು ದಿನ ನೀರು ಇಲ್ಲವೆಂದರೆ ಜನ ತೊಂದರೆಗೀಡಾಗುತ್ತಾರೆ. ಅಂತದ್ದರಲ್ಲಿ 15 ದಿನಗಟ್ಟಲೇ ನೀವು ನೀರು ತಂದು ಕೊಡುತ್ತಿಲ್ಲ. ನಿಮಗೆ ಈ ಕೆಲಸ ಮಾಡಲು ಆಗುತ್ತದೆಯೋ ಇಲ್ಲವೋ ಹೇಳಿ. ಇಲ್ಲವಾದರೆ ಈ ಕೆಲಸ ನೀವು ಬಿಟ್ಟು ಬಿಡಿ. ನಮಗೆ ಸಾಕಾಗಿದೆ ಎಂದು ಮೇಯರ್ ಅವರು ಎಲ್&ಟಿ ಕಂಪನಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/04/2026 04:46 pm

Cinque Terre

14.27 K

Cinque Terre

2

ಸಂಬಂಧಿತ ಸುದ್ದಿ