ಹುಬ್ಬಳ್ಳಿ : ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ನಾಣ್ಣುಡಿ ಇದೆ. ಇಂತಹ ಸರ್ಕಾರಿ ಕೆಲಸದ ಸಮಯಕ್ಕೆ ಚಕ್ಕರ್ ಹಾಕುವ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹುಬ್ಬಳ್ಳಿ ಧಾರವಾಡ ವಲಯ ಕಚೇರಿ-7 ರಲ್ಲಿದ್ದಾರೆ.
ವೀಕ್ಷಕರೇ ಕಳೆದ ಹಲವು ದಿನಗಳಿಂದ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಸ್ವತಃ ಸಾರ್ವಜನಿಕರೇ ಕರೆ ಮಾಡಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಜೋನಲ್-7ರ ರಲ್ಲಿ ಸರ್ಕಾರಿ ಸಮಯ ಬೆಳಿಗ್ಗೆ 10 ಗಂಟೆ ಮೇಲಾದ್ರೂ ಅಧಿಕಾರಿಗಳು ಇರೋದಿಲ್ಲ ಎಂಬ ವಿಷಯ ತಿಳಿಸಿ, ವಿಡಿಯೋ ಸಹ ನೀಡಿದ್ದರು.
ಆ ಬಳಿಕ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಕಾರ್ಯಾಚರಣೆ ನಡೆಸಿದಾಗ ಸತ್ಯ ಬಯಲಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗಳು ಸರ್ಕಾರಿ ಕಚೇರಿ ಸಮಯ 10 ಗಂಟೆಗೆ ಬರದೆ ತಡವಾಗಿ ಬರ್ತಾರೆ, ಇನ್ನೂ ಯಾವೊಬ್ಬ ಅಧಿಕಾರಿ ಕ್ರಮಬದ್ದವಾಗಿ ಸರ್ಕಾರಿ ಗುರುತಿನ ಚೀಟಿ ಕೊರಳಲ್ಲಿ ಹಾಕೋದಿಲ್ಲ. ಹೀಗಾಗಿ ಅಧಿಕಾರಿಗಳು ಯಾರು ಎಂಬುದೇ ದೊಡ್ಡ ಕನ್ ಫ್ಯೂಷನ್.
ಮುಖ್ಯವಾಗಿ ಕಚೇರಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇದೆ, ಆದರೆ ಒಬ್ಬರು ಸರಿ ಇದೆ ಎಂದರೇ, ಇನ್ನೊಬ್ಬರು ಬಂದ್ ಆಗಿದೆ ಸಾರ್ ಅಂತಾರೇ, ಹಾಗಿದ್ರೇ ? ಅಸಲಿ ಕಥೆ ಏನು ? ಗೊತ್ತಿಲ್ಲ.
ಸರ್ಕಾರಿ ಸಮಯ ವಾರದ ಮೊದಲ ದಿನ ಸಮಯ 10:10 ನಿಮಿಷಕ್ಕೆ ಕಚೇರಿಯಲ್ಲಿ ಇರಬೇಕು. ಆದರೆ 10 ಗಂಟೆ ಮೇಲ್ಪಟ್ಟು ಒಬ್ಬೊಬ್ಬ ಅಧಿಕಾರಿಗಳು ಬರ್ತಾರಂತೆ. ಈ ಬಗ್ಗೆ ಸಂಬಂಧಪಟ್ಟ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಾಹಿತಿ ಅಧಿಕಾರಿಗಳು ಸರ್ಕಾರಿ ಕಚೇರಿ ಸಮಯ ಬೆಳಿಗ್ಗೆ 10 -10 ನಿಮಿಷಕ್ಕೂ ಮೊದಲು ಕಚೇರಿಯಲ್ಲಿ ಇರಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನ ಹರಿಸಬೇಕಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/04/2026 07:27 pm
LOADING...