ಹುಬ್ಬಳ್ಳಿ : ಬಿರು ಬೇಸಿಗೆಯಲ್ಲಿ ಜನ, ಜೀವಸಂಕುಲ ಹನಿ ನೀರಿಗಾಗಿ ಪರದಾಡುವ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೆ ನೀರು ರಸ್ತೆ ಮೇಲೆ ಹರಿದು ಪೋಲಾಗುತ್ತಿದೆ.
ಎಸ್.! ವೀಕ್ಷಕರೇ ಹುಬ್ಬಳ್ಳಿ ಮಹಾನಗರ ಪಾಲಿಕೆ ವ್ಯಾಪ್ತಿಯ ದೇಸಾಯಿ ಕ್ರಾಸ್ ರಸ್ತೆ ಬಳಿ ಕಳೆದ ಹಲವಾರು ದಿನಗಳಿಂದ ಈ ರೀತಿ ನೀರು ಪೋಲಾಗಿ ರಸ್ತೆ ಚರಂಡಿ ಸೇರುತ್ತಲೇ ಇದೆ.
ಪರಿಸ್ಥಿತಿ ಹೀಗಿದ್ದರೂ ಸಂಬಂಧಪಟ್ಟ ಹುಬ್ಬಳ್ಳಿ ಮಹಾನಗರ ಪಾಲಿಕೆ ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ತಿಳಿಯದಾಗಿದೆ. ಇಂದು ಬೆಳಿಗ್ಗೆ ದೇಸಾಯಿ ಕ್ರಾಸ್ ಪಿಂಟೋ ರೋಡ್ ಎಂದು ಕರೆಯಲ್ಪಡುವ ರಸ್ತೆ ಬಳಿ ನೀರು ಪೋಲಾಗಿ ವ್ಯರ್ಥವಾಗುತ್ತಿರುವ ದೃಶ್ಯಗಳು ನಾಗರಿಕ ಸಮಾಜಕ್ಕೆ ಬೇಸರ ತರಿಸಿ, ಅವ್ಯವಸ್ಥೆ ಎತ್ತಿ ತೋರಿಸಿವೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/04/2026 04:23 pm
LOADING...