ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ :ಹಿಂದಿ ಹೇರಿಕೆ ಮತ್ತು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಖಂಡಿಸಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ

ಧಾರವಾಡ : ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮತ್ತು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿ ವಿಷಯಕ್ಕೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದನ್ನು ಖಂಡನೀಯ. ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾಗರ ಗಾಯಕವಾಡ, ಹನುಮಂತಪ್ಪ ಮೇಟಿ, ರೆಹಮಾನ ಹೋಳಿ, ರುದ್ರೇಶ ಹವಳದ, ಸಚಿನ ಗಾಣಿಗೇರ, ಮಲ್ಲಮ್ಮ ಗೌಡರ, ಕಲ್ಲಪ್ಪ ಹರಕುರಣಿ, ಪ್ರಭು ಕುಂಬಾರ, ಕಲ್ಲಮೇಶ ಸಾಲಿ, ಸಚಿವ ಪವಾರ, ಬಸವರಾಜ ಒಡ್ಡರ, ಶಿರಾಜ ಧಾರವಾಡ, ಅಹ್ಮದ್ ಮಾಳಗಿ, ಪ್ರಶಾಂತ ಅಮರಾವತಿ, ಮಲ್ಲಿಕ್ ಕಂಬಾರಗಣವಿ ಸೇರಿದಂತೆ ಇತರರಿದ್ದರು.

Edited By :
Kshetra Samachara

Kshetra Samachara

07/04/2026 06:17 pm

Cinque Terre

2.87 K

Cinque Terre

0

ಸಂಬಂಧಿತ ಸುದ್ದಿ