ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮನೆಯ ಆವರಣದಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ!

ಬೆಂಗಳೂರು: ಮನೆಯ ಆವರಣದಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಘಟನೆ ಬೆಳಕಿಗೆ ಬಂದಿದೆ.

ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಅಪರಿಚಿತ ವ್ಯಕ್ತಿಗಳು ಪರಾರಿ ಆಗಿದ್ದಾರೆ. ಶಿವಶಂಕರ್(40 ) ಕೊಲೆಯಾದ ವ್ಯಕ್ತಿ ಅಂತ ತಿಳಿದು ಬಂದಿದೆ. ಹೊಸಕೋಟೆಯ ದಬ್ಬಗುಂಟೆ ಗ್ರಾಮದಲ್ಲಿ ಘಟನೆ ನಡೆದಿದೆ.

ರಾತ್ರಿ ಮನೆಯಿಂದ ಮೊಬೈಲ್ ನಲ್ಲಿ ಮಾತನಾಡುತ್ತಾ ಆಚೆ ಬಂದಿದ್ದ ವ್ಯಕ್ತಿಗೆ ಮೂರು ಜನ ಅಪರಿಚಿತರು ಏಕಾಏಕಿ ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ. ತಲೆ, ಕುತ್ತಿಗೆ ಭಾಗಕ್ಕೆ ಗಂಭೀರ ಗಾಯ ಉಂಟಾಗಿದೆ. ತೀವ್ರ ರಕ್ತಸ್ರಾವದಿಂದ ಶಿವಶಂಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಸಕೋಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Shivu K
PublicNext

PublicNext

14/04/2026 03:20 pm

Cinque Terre

15.57 K

Cinque Terre

0

ಸಂಬಂಧಿತ ಸುದ್ದಿ