ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ವರುನಾರ್ಭಟ ಧರೆಗುರುಳಿದ ವಿಷ್ಣುವರ್ಧನ್ ಕಟೌಟ್

ಬೆಂಗಳೂರು : ನಗರದಲ್ಲಿ ಸುರಿದ ಭಾರಿ ಮಳೆ ಹಾಗೂ ಗಾಳಿಯ ರಭಸಕ್ಕೆ ಪ್ರಸನ್ನ ಚಿತ್ರಮಂದಿರದ ಬಳಿ ನಿಲ್ಲಿಸಲಾಗಿದ್ದ ದಿವಂಗತ ನಟ ವಿಷ್ಣುವರ್ಧನ್ ಅವರ ಬೃಹತ್ ಕಟೌಟ್ ಧರೆಗುರುಳಿದೆ. ಇತ್ತೀಚೆಗೆ ಮರು ಬಿಡುಗಡೆಯಾದ "ಕೋಟಿಗೊಬ್ಬ" ಚಿತ್ರದ ಪ್ರಚಾರದ ಭಾಗವಾಗಿ ಈ ಕಟೌಟ್ ಅನ್ನು ಸ್ಥಾಪಿಸಲಾಗಿತ್ತು.

ಇನ್ನೂ ಕಟೌಟ್ ರಸ್ತೆಯಲ್ಲಿದ್ದ ಒಂದು ಆಟೋ ರಿಕ್ಷಾದ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಆಟೋಗೆ ಸ್ವಲ್ಪ ಹಾನಿಯಾಗಿದೆಯಾದರೂ, ಯಾವುದೇ ಪ್ರಾಣಾಪಾಯ ಅಥವಾ ಸಾರ್ವಜನಿಕರಿಗೆ ಗಾಯಗಳಾಗಿಲ್ಲ. ಈ ಘಟನೆಯು ಸ್ಥಳೀಯರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಧರೆಗುರುಳಿದ ಕಟೌಟ್ ಅನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

Edited By : Vinayak Patil
PublicNext

PublicNext

29/04/2026 08:28 pm

Cinque Terre

14.61 K

Cinque Terre

0

ಸಂಬಂಧಿತ ಸುದ್ದಿ