ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬೌರಿಂಗ್ ಆಸ್ಪತ್ರೆಗೆ ಡಿಸಿಎಂ ತಡರಾತ್ರಿ ಭೇಟಿ!

ಬೆಂಗಳೂರು : ಭಾರೀ ಮಳೆ-ಗಾಳಿಯ ಹೊಡೆತಕ್ಕೆ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು ಏಳು ಮಂದಿ ಮೃತಪಟ್ಟ ಹಿನ್ನೆಲೆ ನಿನ್ನೆ ತಡರಾತ್ರಿ ಡಿಸಿಎಂ ಡಿ. ಕೆ.ಶಿವಕುಮಾರ್ ಅವರು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಮತ್ತು ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಂಥ ದುರ್ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುವುದು.

ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ನೂರು ವರ್ಷಗಳಷ್ಟು ಹಳೆಯದಾಗಿತ್ತೆಂಬ ಮಾಹಿತಿ ಇದೆ, ಇದಕ್ಕೆಲ್ಲ ಜಿಬಿಎ ಹೊಣೆಯಾಗದು ಎಂದರು. ಇನ್ನು, ಇಂಥ ಸಂದರ್ಭದಲ್ಲೂ ಪ್ರತಿಪಕ್ಷದವರು ಆರೋಪ ಮಾಡೋದು ಸರಿಯಲ್ಲ ಅಂತಾನೂ ಡಿಸಿಎಂ ಅವರು ತಿಳಿಸಿದರು.

Edited By : Manjunath H D
PublicNext

PublicNext

30/04/2026 02:26 pm

Cinque Terre

6.8 K

Cinque Terre

0

ಸಂಬಂಧಿತ ಸುದ್ದಿ