ಬೆಂಗಳೂರು: ಊರಬ್ಬ ಮುಗಿಸಿ ಮನೆಯಲ್ಲಿ ಮಲಗಿದ್ದ ವ್ಯಕ್ತಿ ದಾರುಣ ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಲ್ಲು ಬಿದ್ದು ಸ್ಥಳದಲ್ಲೇ ಉಸಿರಾಟ ನಿಲ್ಲಿಸಿದ್ದಾನೆ. ಕಸ್ತೂರಬಾ ನಗರದ ಮಂಜುನಾಥ್ ದಾರುಣ ಸಾವು ಕಂಡಿದ್ದಾನೆ.
ಶೀಟ್ ಮನೆಯ ಪಕ್ಕದಲ್ಲೇ ಇರುವ ಆರು ಅಂತಸ್ತಿನ ಕಟ್ಟಡದ ಟೆರೇಸ್ ಮೇಲೆ ಅವೈಜ್ಞಾನಿಕವಾಗಿ ಶೀಟ್ ಬಳಕೆ ಮಾಡಲಾಗಿತ್ತು. ಶೀಟ್ ಮೇಲೆ ಸರಿಯಾದ ರೀತಿ ಫಿಟ್ ಮಾಡದೆ ಕಲ್ಲುಗಳನ್ನು ಇಟ್ಟು ನಿರ್ಲಕ್ಷ್ಯ ಮಾಡಿದ್ದಾರೆ. ಗಾಳಿ ಸಮೇತ ಸುರಿದ ಮಳೆಗೆ ಶೀಟ್ ಸಮೇತ ಕಲ್ಲುಗಳು ಕೆಳಗೆ ಬಿದ್ದು ಅವಘಡ ಸಂಭವಿಸಿದೆ. ಕೆಳ ಮಹಡಿಯ ಶೀಟ್ ಮೇಲೆ ಕಲ್ಲು ಬಿದ್ದು ಮಂಜುನಾಥ್ ತಲೆ ಮೇಲೆ ಬಿದ್ದಿತ್ತು.
PublicNext
30/04/2026 06:14 pm
LOADING...