ಬೆಂಗಳೂರು : ಮೈಸೂರು ರಸ್ತೆ ಕಸ್ತೂರಿಬಾ ನಗರದ ಅಶ್ವತ್ಥಕಟ್ಟೆ ರಸ್ತೆಯಲ್ಲಿ ಸುರಿದ ರಣಭೀಕರ ಮಳೆ ಮತ್ತು ಬಿರುಗಾಳಿಗೆ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಗೋಡೋನ್ ಶೀಟ್ ಹಾರಿ ಬಿದ್ದು ಮನೆಯಲ್ಲಿದ್ದ 35 ವರ್ಷದ ಮಂಜು ದುರಂತ ಸಾವನ್ನಪ್ಪಿದ್ದಾರೆ.
ಮನೆಯೊಳಗಡೆ ಕುಟುಂಬದವರೊಂದಿಗೆ ಇದ್ದ ಮಂಜು ಅವರ ಮೇಲೆ ಬಿರುಗಾಳಿಗೆ ಹಾರಿ ಬಂದ ಸಿಮೆಂಟ್ ಶೀಟ್ ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಿರುಗಾಳಿ ಸಹಿತ ಸುರಿದ ಮಳೆಯ ರಭಸಕ್ಕೆ ಹಲವಾರು ಗೋಡೋನ್ ಗಳ ಶೀಟ್ ಗಳು ಹಾರಿ ಹೋಗಿ ಸುತ್ತಮುತ್ತಲಿನ ಮನೆಗಳ ಮೇಲೆ ಬಿದ್ದಿವೆ. ಈ ಘಟನೆಯಿಂದ ಹಲವು ಮನೆಗಳು ಮತ್ತು ಗೋಡೋನ್ ಗಳಿಗೆ ವ್ಯಾಪಕ ಹಾನಿಯಾಗಿದೆ.
PublicNext
30/04/2026 01:37 pm
LOADING...