ವಿಜಯಪುರ: ಇವತ್ತು ನನ್ನ ಪಾಲಿಗೆ ಅತ್ಯಂತ ದುಃಖಕರ ದಿನ. ವಿಜಯಪುರ ಜಿಲ್ಲೆಯ ಪ್ರಖ್ಯಾತ ಕ್ರಿಮಿನಲ್ ವಕೀಲರು, ಕಾನೂನು ವೃತ್ತಿಯ ಜೊತೆಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಜನಾನುರಾಗಿ ಹಾಗೂ ನನ್ನ ಆತ್ಮೀಯ ಸ್ನೇಹಿತ ಸುರೇಶ ಹನುಮಂತರಾಯ ಲಗಳಿ ಅವರು ನಮ್ಮನ್ನೆಲ್ಲ ಅಗಲಿದ್ದಾರೆ ಎಂದು ಮುದ್ದೇಬಿಹಾಳ ಕ್ಷೇತ್ರ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ದುಃಖ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಲಗಳಿ ಅವರು ವಿಜಯಪುರ ನಗರದ ಸಮಗ್ರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು. ಅಲ್ಲದೇ ಬಿ.ಎಲ್.ಡಿ.ಇ ಸಂಸ್ಥೆ, ಡಿ.ಎಲ್.ಆರ್.ಸಿ ಹಾಗೂ ಸ್ಪಿನ್ನಿಂಗ್ ಮಿಲ್ ನ ನಿರ್ದೇಶಕರಾಗಿ ಅಗ್ರಗಣ್ಯ ಸೇವೆ ಸಲ್ಲಿಸಿದವರು.
ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಆತ್ಮೀಯ ಸ್ನೇಹಿತರಾಗಿ, ನನ್ನ ರಾಜಕೀಯ ಆರಂಭದ ದಿನಗಳಿಂದಲೂ ಬೆನ್ನೆಲುಬಾಗಿ ನಿಂತವರು. ಇಂತಹ ಸಮಾಜಮುಖಿ, ಪ್ರಗತಿಪರ ಹಾಗೂ ಶ್ರೇಷ್ಠ ಕಾನೂನು ತಜ್ಞರ ಅಗಲಿಕೆ ಇಡೀ ವಿಜಯಪುರ ಜಿಲ್ಲೆಗೆ ತುಂಬಲಾರದ ನಷ್ಟ.
ಅವರ ಕುಟುಂಬದ ಈ ನೋವಿನಲ್ಲಿ ನಾನೂ ಭಾಗಿ. ಸುರೇಶ ಲಗಳಿ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂಶಾಂತಿ ಎಂದು ಶಾಸಕರು ಸಂತಾಪ ಸೂಚಿಸಿದ್ದಾರೆ.
PublicNext
19/04/2026 10:21 pm
LOADING...