ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಸಚಿವ ಎಂ.ಬಿ. ಪಾಟೀಲರಿಗೆ ಜೋಡೆತ್ತು ಬಂಡಿಯಲ್ಲಿ ಮೆರವಣಿಗೆ, ತುಲಾಭಾರ; ಗ್ರಾಮಸ್ಥರ ಸಂಭ್ರಮ

ವಿಜಯಪುರ: ವಿಜಯಪುರ ಜಿಲ್ಲೆಯ ಬರಟಗಿ ಗ್ರಾಮದಲ್ಲಿ 734 ಲಕ್ಷ ರೂ. ವೆಚ್ಚದಲ್ಲಿ ಅರಕೇರಿ, ಬರಟಗಿ ಮತ್ತು ಹಂಚಿನಾಳ ಪಿ.ಎಚ್ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಬಳಿಕ 978 ಲಕ್ಷ ರೂ. ವೆಚ್ಚದಲ್ಲಿ ಲೋಹಗಾಂವ, ಟಕ್ಕಳಕಿ, ಹುಬನೂರ, ಜಾಲಗೇರಿ, ಇಟ್ಟಂಗಿಹಾಳ ಹಾಗೂ ಸಿದ್ಧಾಪುರ ಗ್ರಾಮಗಳಲ್ಲಿ ಸರಣಿ ಬಾಂದಾರಗಳ ನಿರ್ಮಾಣ ಕಾರ್ಯಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಅವರೊಂದಿಗೆ ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡಿದರು.

ಇನ್ನೂ ಈ ವೇಳೆ ತಮ್ಮ ಜಮೀನುಗಳಿಗೆ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಎನ್. ಎಸ್. ಬೋಸರಾಜು ಅವರಿಗೆ ಲೋಹಗಾಂವ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಜೋಡೆತ್ತಿನ ಚಕ್ಕಡಿಯಲ್ಲಿ ಸಚಿವದ್ವಯರನ್ನು ಕೂಡಿಸಿ ಚಕ್ಕಡಿ ಬಂಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಗ್ರಾಮಸ್ಥರು ಸಚಿವರನ್ನು ವಿಶೇಷವಾಗಿ ಬರಮಾಡಿಕೊಂಡರು.

ವೇದಿಕೆಯ ಆವರಣದಲ್ಲಿ ಜೆಸಿಬಿ ಮೂಲಕ ಸಚಿವರಿಬ್ಬರನ್ನು ಹೂಮಾಲೆ ತೊಡಿಸುವ ಮೂಲಕ ತಮ್ಮ ಅಭಿಮಾನ ಮೆರೆದರು. ವೇದಿಕೆಯಲ್ಲಿದ್ದ ಸಚಿವರಿಬ್ಬರಿಗೆ ಪೇಟಾ ಸುತ್ತಿ, ಒಣದ್ರಾಕ್ಷಿ ಹಾರ ಹಾಗೂ ಬೆಳ್ಳಿ‌‌ಮೂರ್ತಿ ನೀಡುವ ಮೂಲಕ ಗ್ರಾಮಸ್ಥರು ವಿಶೇಷವಾಗಿ ಸನ್ಮಾನಿಸಿ ಸಂಭ್ರಮಿಸಿದರು.

ಸಚಿವರಾದ ಎನ್‌.ಎಸ್‌. ಭೋಸರಾಜು ಹಾಗೂ ಡಾ.ಎಂ.ಬಿ.ಪಾಟೀಲರಿಗೆ ಗ್ರಾಮಸ್ಥರ ಪರವಾಗಿ ರೈತರು ತಾವು ಬೆಳೆದ ಹಣ್ಣು‌ ಹಂಪಲುಗಳಿಂದ ತುಲಾಭಾರ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.

Edited By :
PublicNext

PublicNext

02/05/2026 10:17 pm

Cinque Terre

13.73 K

Cinque Terre

0

ಸಂಬಂಧಿತ ಸುದ್ದಿ