ಬೆಂಗಳೂರು: ಕಿತ್ತೂರಿನ ಗತ್ತು ಈಗ ಇಡೀ ದೇಶಕ್ಕೆ ತಿಳಿಯುವ ಸಮಯ ಬಂದಿದೆ! ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಅಂದರೆ AI ತಂತ್ರಜ್ಞಾನವನ್ನು ಬಳಸಿಕೊಂಡು ಐತಿಹಾಸಿಕ ಚಿತ್ರ “ರಾಣಿ ಚೆನ್ನಮ್ಮ” ಸಿದ್ಧವಾಗಿದ್ದು, ಇದರ ಭವ್ಯವಾದ ಟೀಸರ್ ಬಿಡುಗಡೆಯಾಗಿದೆ.
ಶ್ವೇತಾ ಶೆಟ್ಟಿ ನಿರ್ದೇಶನದ ಈ ಚಿತ್ರವು ಇತಿಹಾಸವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆಯುವ ಅದ್ಭುತ ಪ್ರಯತ್ನ. ಈ ಸಿನಿಮಾದ ವಿಶೇಷತೆ ಏನೆಂದರೆ, ಯುದ್ಧದ ಸನ್ನಿವೇಶಗಳು ಮತ್ತು ದೃಶ್ಯ ವಿನ್ಯಾಸಗಳನ್ನು AI ಮೂಲಕ ಸೃಜಿಸಲಾಗಿದೆ. ಆದರೆ ಆಡಿಯೋ ಮತ್ತು ಸಂಗೀತವನ್ನು ಮಾನವ ಸೃಜನಶೀಲತೆಯಿಂದ ಮ್ಯಾನುಯಲ್ ಆಗಿ ನಿರ್ಮಿಸಿರುವುದು ತಂತ್ರಜ್ಞಾನ ಹಾಗೂ ಕಲೆಯ ಸಮತೋಲನಕ್ಕೆ ಸಾಕ್ಷಿಯಾಗಿದೆ.
ಲತಾ ಜೈಪ್ರಕಾಶ್ ಅವರ ಬಿಎಂಕೆ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ಅದ್ಧೂರಿಯಾಗಿ ಮೂಡಿಬಂದಿದೆ.
ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ವೀರವನಿತೆಯ ಮನೋಬಲ ಮತ್ತು ಹೋರಾಟವನ್ನು ಈ ತಂತ್ರಜ್ಞಾನ ಹೇಗೆ ಜೀವಂತಗೊಳಿಸಿದೆ ಎಂಬುದನ್ನು ನೋಡಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಸಂಕಲನದಲ್ಲಿ ಸಂಜೀವ್ ರೆಡ್ಡಿ ಮತ್ತು ಸಂಗೀತದಲ್ಲಿ ಶ್ರೀಹರಿ ಅವರ ಶ್ರಮ ಎದ್ದು ಕಾಣುತ್ತಿದೆ.
PublicNext
20/04/2026 02:57 pm
LOADING...