ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಆರೋಪಿ ಬಂಧಿಸಿದ ಪೊಲೀಸರು

ಹಾವೇರಿ ನಗರದ ಗಾಂಧಿ ವೃತ್ತದಲ್ಲಿನ ಗಾಂಧೀಜಿ ಪುತ್ಥಳಿ ಧ್ವಂಸಗೊಳಿಸಿದ್ದ ಆರೋಪಿ ಬಂಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ೨೮ ವರ್ಷದ ವೈಭವ ರಾಯ್ಕರ್ ಎಂದು ಗುರುತಿಸಲಾಗಿದೆ. ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ನಗರ ಪೊಲೀಸರಿಂದ ವಿಶೇಷ ತಂಡ ರಚನೆ ಮಾಡಿ ಆರೋಪಿ ಪತ್ತೆಗೆ ಜಾಲ ಬೀಸಿದ್ದರು. ಆರೋಪಿ ವೈಭವ ರಾಯ್ಕರ್ ೨೮ ವರ್ಷದವನಿದ್ದು ಮಾನಸಿಕ ಅಸ್ವಸ್ಥ ಎಂದು ಗುರುತಿಸಲಾಗಿದೆ.

ಬೇರೆ ಬೇರೆ ಕಡೆಯ ಸಿಸಿಟಿವಿಯ ದೃಶ್ಯಗಳನ್ನು ಪರಿಶೀಲನೆ ನಡೆಸಿದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ಅಡಿ ಎತ್ತರದ ಗಾಂಧೀಜಿ ಪುತ್ಥಳಿ ಸೋಮವಾರ ಮುಂಜಾನೆ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

Edited By : Nirmala Aralikatti
Kshetra Samachara

Kshetra Samachara

20/04/2026 07:57 pm

Cinque Terre

7.22 K

Cinque Terre

0

ಸಂಬಂಧಿತ ಸುದ್ದಿ