ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾಯಾದಿಗಳ ಆಸ್ತಿ ಕಲಹ ಕೊಲೆಗೆ ಯತ್ನ 10 ದಿನ ಕಳೆದರೂ ಆರೋಪಿಗಳನ್ನು ಬಂಧಿಸದ ಖಾಕಿ

ಹಾವೇರಿ: ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ರಾಜಕೀಯ ಪ್ರಭಾವದಿಂದ ಆರೋಪಿಗಳನ್ನು ಇದು ವರೆಗೂ ಬಂಧಿಸಿಲ್ಲ ಎಂಬ ಆರೋಪ ಹಂಸಬಾವಿ ಪೊಲೀಸರ ಮೇಲೆ ಇದೀಗ ಕೇಳಿ ಬಂದಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಸುತ್ತಕೋಟಿ ಗ್ರಾಮದಲ್ಲಿ ಎರಡು ಗುಂಟೆ ಜಾಗದ ವಿಚಾರಕ್ಕೆ ಹಲ್ಲೆಗೊಳಗಾದ ಸಿದ್ದೇಶ ಬಣಕಾರ ಹಾಗೂ ಆರೋಪಿ ರವಿ ಬಣಕಾರ ಕುಟುಂಬದ ನಡುವೆ ಜಾಗದ ವಿಚಾರಕ್ಕೆ ಆಗಾಗ ಕಲಹ ಆಗುತ್ತಿತ್ತು. ಆದರೆ ಕಳೆದ ಏಪ್ರಿಲ್ 21 ರ ರಾತ್ರಿ ರವಿ ಬಣಕಾರ ಕುಟುಂಬದವರು ಸಿದ್ದೇಶ ಬಣಕಾರ ಕುಟುಂಬದ ಮೇಲೆ ಕುಡುಗೋಲಿನಿಂದ ದಾಳಿ ನಡೆಸಿದ್ದಾರೆ.

ಗಲಾಟೆಯಲ್ಲಿ ಸಿದ್ದೇಶ ಬಣಕಾರ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದಾಗ ಕೈಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ, ಆದರೆ ಘಟನೆ ನಡೆದು 10 ದಿನ ಕಳೆದರೂ ಕೂಡ ಹಂಸಬಾವಿ ಪೊಲೀಸರು ಯಾವೊಬ್ಬ ಆರೋಪಿಯನ್ನು ಬಂಧನ ಮಾಡಿಲ್ಲ, ಇದಕ್ಕೆ ರಾಜಕೀಯ ಕೈವಾಡವಿದೆ ಅಂತಾ ಹಲ್ಲೆಗೊಳಗಾದ ಸಿದ್ದೇಶ ಕುಟುಂಬದವರು ಆರೋಪವನ್ನು ಮಾಡುತ್ತಿದ್ದಾರೆ.

ಸದ್ಯ ಹಂಸಬಾವಿ ಪೊಲೀಸ್ ಠಾಣೆಯಲ್ಲಿ 8 ಜನರ ವಿರುದ್ಧ FIR ದಾಖಲು ಆಗಿದ್ದರೂ ಕೂಡ ಆರೋಪಿಗಳನ್ನು ಬಂಧನ ಮಾಡದೆ ಇರೋದು ಪೊಲೀಸ್ ಇಲಾಖೆ ವಿರುದ್ಧ ಸಾಕಷ್ಟು ಅನುಮಾನ ಹುಟ್ಟುಹಾಕಿದ್ದು ಸುಳ್ಳಲ್ಲ

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹಾವೇರಿ

Edited By : Vinayak Patil
PublicNext

PublicNext

02/05/2026 01:45 pm

Cinque Terre

10.9 K

Cinque Terre

0

ಸಂಬಂಧಿತ ಸುದ್ದಿ