ಕೊಪ್ಪಳ:- : ಕೊಪ್ಪಳ ನಗರದ 07 ನೇ ಮತ್ತು 1ನೇ ವಾರ್ಡ್ ಹಾಗೂ 06 ನೇ ನಡುವೆ ಬರುವ ರಾಜಕಾಲುವೆ ಅತಿಕ್ರಮಣ ಒತ್ತುವರಿ ಆರೋಪ ಇದೆ. ನಗರಸಭೆ ಸದಸ್ಯರು ಹಕ್ಕುಪತ್ರ, ನಮೂನೆ ಕೊಟ್ಟು ಜನರಿಗೆ ಮನೆಗಳು ಕಟ್ಟಿಸಲಿಕ್ಕೆ ಅವಕಾಶ ಮಾಡಿಕೊಟ್ಟ ಕಾರಣ ಅವಾಂತರ ಸೃಷ್ಟಿಯಾದ ಆರೋಪವಿದೆ. , ಇವತ್ತು 03 ಸಾರ್ವಜನಿಕ ಶೌಚಾಲಯಗಳ ಹೊಲಸು ನೀರು ರಸ್ತೆ ಮೇಲೆ ಓಣಿಯಲ್ಲಿ ಬರುವುದರಿಂದ, ಜನರಿಗೆ ಒಂದು ಓಣಿಯಿಂದ ಮತ್ತೊಂದು ಓಣಿಗೆ , ಹೋಗುವುದಕ್ಕೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.
ಕೊಪ್ಪಳದಲ್ಲಿ ಹಳೆಯದಾದ ಐತಿಹಾಸಿಕ ಕಂದಕ್, ಅದನ್ನು ರಾಜಕಾಲುವೆ ಅಂತ ಪರಿಗಣಿಸಿದ್ದಾರೆ, ಈ ಕುರಿತು ನಗರಸಭೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದೇ ಧೋರಣೆ ಮುಂದುವರಿದರೆ ಹೋರಾಟ ಮಾಡುವ ಎಚ್ಚರಿಕೆ ಜನ ನೀಡಿದ್ದಾರೆ.
PublicNext
22/04/2026 11:14 am
LOADING...