ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಕಸದ ರಾಶಿಯೇ ಇನ್ನು ಹಸಿರು ಪಾರ್ಕ್ - ನಗರಸಭೆಯ ವಿಶಿಷ್ಟ ಹೆಜ್ಜೆ!

ಕೊಪ್ಪಳ: ರಸ್ತೆ ಬದಿ ಕಸ ಹಾಕುವುದನ್ನು ತಡೆಯಲು ಕೊಪ್ಪಳ ನಗರಸಭೆ ಇದುವರೆಗೂ ಹಲವು ಪ್ರಯತ್ನಗಳನ್ನು ನಡೆಸಿತ್ತು. ಕಸ ಹಾಕದಂತೆ ಸೂಚನಾ ಫಲಕಗಳನ್ನು ಅಳವಡಿಸುವುದು, ಕಸ ಹಾಕುವ ಸ್ಥಳಗಳಲ್ಲಿ ರಂಗೋಲಿ ಬಿಡಿಸಿ ಸ್ವಚ್ಛತೆಯ ಸಂದೇಶ ಸಾರುವಂತಹ ಪ್ರಯತ್ನಗಳು ನಡೆದಿತ್ತು. ಆದರೆ, ಈ ಯಾವ ಪ್ರಯತ್ನಗಳೂ ಜನರ ಮೇಲೆ ಪರಿಣಾಮ ಬೀರದೆ, ಕಸ ಹಾಕುವ ಪ್ರವೃತ್ತಿ ಮುಂದುವರಿದಿತ್ತು.

ವಿನೂತನ ಉಪಾಯಕ್ಕೆ ನಗರಸಭೆ ಮೊರೆ

ಇದೀಗ ಕೊಪ್ಪಳ ನಗರಸಭೆಯು ಪರಿಸ್ಥಿತಿಯನ್ನು ಸುಧಾರಿಸಲು ಹೊಸ ಮತ್ತು ವಿನೂತನ ಉಪಾಯಕ್ಕೆ ಮೊರೆ ಹೋಗಿದೆ. ಕಸ ಹಾಕುವ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಸಣ್ಣ ಪಾರ್ಕ್‌ಗಳನ್ನು ನಿರ್ಮಿಸುವ ಮೂಲಕ ರಸ್ತೆ ಬದಿ ಕಸ ಹಾಕುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

ಈಗಾಗಲೇ ಪಾರ್ಕ್‌ಗಳ ನಿರ್ಮಾಣ

ಈಗಾಗಲೇ ಈ ಯೋಜನೆಯಡಿ ಬಹಾರಪೇಟೆ ಬಳಿಯ ಸಾರ್ವಜನಿಕ ಶೌಚಾಲಯ, ಟ್ರಿನಿಟಿ ಶಾಲೆ ಮತ್ತು ಆಜಾದ್ ಸರ್ಕಲ್ ಬಳಿ ಪೌರಕಾರ್ಮಿಕರು ಸಣ್ಣ ಸಣ್ಣ ಪಾರ್ಕ್‌ಗಳನ್ನು ನಿರ್ಮಿಸಿದ್ದಾರೆ. ಈ ವಿನೂತನ ಪ್ರಯತ್ನದಿಂದಾದರೂ ರಸ್ತೆ ಬದಿ ಕಸ ಹಾಕುವ ಪ್ರವೃತ್ತಿ ಸಂಪೂರ್ಣವಾಗಿ ನಿಲ್ಲುವುದೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಪೌರಕಾರ್ಮಿಕ ಸಂಘದ ಮುಖಂಡ ಲಾಲಹುಸೇನ ಮನಿಯಾರ ತಿಳಿಸಿದ್ದಾರೆ.

Edited By : Somashekar
PublicNext

PublicNext

28/04/2026 10:40 am

Cinque Terre

7.88 K

Cinque Terre

0