ಕುಷ್ಟಗಿ : ರೋಗಿಗಳ ಜೀವ ರಕ್ಷಕ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ಸುತ್ತ ಚರಂಡಿಗಳು ಭರ್ತಿಯಾಗಿ ಅವ್ಯವಸ್ಥೆ ತಾಂಡವ ಆಡುತ್ತಲಿದೆ.
ಎಸ್..! ವೀಕ್ಷಕರೇ ಕುಷ್ಟಗಿ ತಾಲೂಕು ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು ಆಗಮಿಸುತ್ತಾರೆ, ರೋಗಿಗಳ ಚಿಕಿತ್ಸೆ ಜೊತೆ ನೈರ್ಮಲ್ಯ ಗಮನಿಸಬೇಕಾದ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಪರಿಣಾಮ ತಾಲೂಕು ಆಸ್ಪತ್ರೆ ಕಾಂಪೌಂಡ್ ಗೋಡೆ ಮುಂದಿನ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕಸ, ಕಲುಷಿತ ನೀರು ತುಂಬಿ ದುರ್ವಾಸನೆ ತಲೆದೋರಿದೆ.
ಕುಷ್ಟಗಿ ಪುರಸಭೆ ತಾಲೂಕು ಆಸ್ಪತ್ರೆ ಆವರಣದ ಮುಂದಿನ ಚರಂಡಿ ಸ್ವಚ್ಛತೆ ಮರೆತ ಹಿನ್ನೆಲೆಯಲ್ಲಿ ಎಲ್ಲೆಡೆ ಅವ್ಯವಸ್ಥೆ ತುಂಬಿ ಸೊಳ್ಳೆ ಕಾಟ ಹಾಗೂ ಅನೈರ್ಮಲ್ಯವೇ ತುಂಬಿದೆ.
ಈ ಬಗ್ಗೆ ಸಂಬಂಧಪಟ್ಟ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರಾ ? ಕಾದು ನೋಡಬೇಕಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಷ್ಟಗಿ
PublicNext
06/05/2026 11:10 am
LOADING...