ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಅವನತಿಯತ್ತ ಐತಿಹಾಸಿಕ ಕೊಳ್ಳಿನ ಕೆರೆ

ಕೊಪ್ಪಳ: ಐತಿಹಾಸಿಕ ಕೊಳ್ಳಿನ ಕೆರೆ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿ ಅಂತ ಹಲವು ಸಲ ಗ್ರಾಮಸ್ಥರು ಆಗ್ರಹಿಸಿದರು ಸರ್ಕಾರ ತಲೆ ಕೆಡಿಸಿ ಕೊಂಡ ಹಾಗೆ ಕಾಣಿಸ್ತಾ ಇಲ್ಲ. ಕೊಪ್ಪಳ ತಾಲೂಕಿನ ಶಹಪುರ, ಕೆರೆಹಳ್ಳಿ ಮತ್ತು ಅಗಳಕೇರಿ ಮಧ್ಯ ಭಾಗದಲ್ಲಿರುವ ಐತಿಹಾಸಿಕ ಕೊಳ್ಳಿನ ಕೆರೆ ದುಃಸ್ಥಿತಿಗೆ ತಲುಪಿದೆ.

ಕರ್ನಾಟಕದ ಟಿ.ಟಿ.ಡಿ ಎಂದೇ ಜನಪ್ರಿಯತೆ ಪಡೆದಿರುವ ತಿರುಗಲ್ ತಿಮ್ಮಪ್ಪ ದೇವಸ್ಥಾನ ಪರಿಸರದಲ್ಲಿ ಈ ಕೆರೆ ಇದೆ. ಐತಿಹಾಸಿಕ ಕೊಳ್ಳಿನ ಕೆರೆ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕೆಂದು ಸ್ಥಳೀಯರು ಕಳೆದ ಹಲವಾರು ವರ್ಷಗಳಿಂದ ಮನವಿ ಮಾಡುತ್ತ ಬರುತ್ತಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಕೆರೆ ಒಡಲು ಬಿರಿದು ನಿಂತಿದೆ. ಕಾಡಿನಲ್ಲಿರುವ ವನ್ಯಜೀವಿಗಳು ನೀರಿರದೇ ಬಳಲುತ್ತಿವೆ. ನವಿಲುಗಳು, ನರಿ, ಕಾಡುಕೋಳಿ, ಚಿರತೆ, ಕರಡಿಗಳು ವಾಸವಾಗಿರುವ ಈ ಪ್ರದೇಶದಲ್ಲಿ ಇನ್ನಾದರೂ ಕೊಪ್ಪಳ ಜಿಲ್ಲಾಡಳಿತ ಈ ತಾಣವನ್ನು ಅಭಿವೃದ್ಧಿಪಡಿಸುವುದೇ? ಕಾದು ನೋಡಬೇಕಿದೆ.

Edited By :
PublicNext

PublicNext

05/05/2026 08:04 am

Cinque Terre

10.79 K

Cinque Terre

0