ಶಿರಸಿ: ಪರೀಕ್ಷೆ ಬರೆದಿದ್ದರೂ ಅಂಧ ವಿದ್ಯಾರ್ಥಿನಿಯೊಬ್ಬಳನ್ನು ‘ಗೈರುಹಾಜರಿ’ ಎಂದು ತೋರಿಸುವ ಮೂಲಕ ಶಿಕ್ಷಣ ಮಂಡಳಿಯು ದೊಡ್ಡ ಎಡವಟ್ಟು ಮಾಡಿದೆ. ನಗರದ ಯೂನಿಯನ್ ಪ್ರೌಢಶಾಲೆಯ ಲೀಜಾ ಖಾನ್ ಎಂಬ ಪ್ರತಿಭಾವಂತ ವಿದ್ಯಾರ್ಥಿನಿ ಈ ಅನ್ಯಾಯಕ್ಕೆ ಒಳಗಾಗಿದ್ದಾಳೆ.
ಹುಟ್ಟು ಅಂಧಳಾಗಿದ್ದರೂ ಛಲ ಬಿಡದೆ ಪರೀಕ್ಷೆ ಬರೆದಿದ್ದ ಈಕೆ, ಉರ್ದುವಿನಲ್ಲಿ 124 ಮತ್ತು ಕನ್ನಡದಲ್ಲಿ 100 ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
ಉಳಿದ ವಿಷಯಗಳಲ್ಲೂ ಉತ್ತಮ ಅಂಕ ಬಂದಿದ್ದರೂ, ಸಮಾಜ ವಿಜ್ಞಾನ ಪರೀಕ್ಷೆಗೆ ಗೈರಾಗಿದ್ದಾಳೆ ಎಂದು ಅಂಕಪಟ್ಟಿಯಲ್ಲಿ ನಮೂದಿಸಲಾಗಿದೆ. ಇದರಿಂದಾಗಿ ಆಕೆಯ ಫಲಿತಾಂಶಕ್ಕೆ ಹಿನ್ನಡೆಯಾಗಿದ್ದು, ವಿದ್ಯಾರ್ಥಿನಿ ಮತ್ತು ಪೋಷಕರು ತೀವ್ರ ನೋವುಂಟಾಗಿದೆ.
ಇಲಾಖೆಯ ಈ ಬೇಜವಾಬ್ದಾರಿತನಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ಪರೀಕ್ಷಾ ಕೇಂದ್ರದ ಹಾಜರಾತಿಯನ್ನು ಪರಿಶೀಲಿಸಿ, ತಪ್ಪು ಸರಿಪಡಿಸಿ ಆಕೆಗೆ ನ್ಯಾಯ ಒದಗಿಸಬೇಕು ಎಂದು ಪೋಷಕರು ಮತ್ತು ಮುಖಂಡರು ಶಾಸಕರಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
PublicNext
23/04/2026 05:55 pm
LOADING...