ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಷ್ಠೆಯಿಂದ ಬುಗವಂತನ ಸೇವೆ ಮಾಡಿದರೆ ದೇವರು ಆಶೀರ್ವಾದ ಮಾಡುತ್ತಾನೆ : ರಾಮಪ್ಪ

ಸಿದ್ದಾಪುರ : ನಾವು ದೇವರ ಕೆಲಸ ಕಾರ್ಯಗಳನ್ನು ಶ್ರದ್ಧಾ ಹಾಗೂ ಭಕ್ತಿಯಿಂದ ಮಾಡಬೇಕು, ನಿಷ್ಠೆಯಿಂದ ಭಗವಂತನ ಸೇವೆ ಮಾಡಿದರೆ ದೇವರು ಆಶೀರ್ವಾದ ಮಾಡುತ್ತಾನೆ. ಭಗವಂತನ ಸೇವೆ ನಿರಂತರವಾಗಿದ್ದರೆ ಒಮ್ಮೆ ಫಲ ಸಿಕ್ಕೆ ಸಿಗುತ್ತದೆ ಎಂದು ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿ ರಾಮಪ್ಪ ನವರು ಹೇಳಿದರು.

ಶ್ರೀ ಗುರುಬ್ರಹಸ್ಪತಿ ಮಠ ಶ್ರೀ ಕ್ಷೇತ್ರ ಶಿಗ್ಗಾಮನೆಯಲ್ಲಿ ಅವಧೂತ ಯೋಗೇಂದ್ರ ಸ್ವಾಮೀಜಿ ಹಾಗೂ ನಿಶ್ಚಲಾನಂದ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ನಡೆದ ಎಲೆಚುಕ್ಕೆ ರೋಗದ ನಿಯಂತ್ರಣಕ್ಕಾಗಿ ಅಭಯಯಜ್ಞ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜಾ ವಿಧಾನಗಳಿಗೆ ಚಾಲನೆ ನೀಡಿ ಧರ್ಮ ಸಭೆಯ ಸಾನಿಧ್ಯವಹಿಸಿ ಮಾತನಾಡಿದರು.

ಔಷಧಿಗಳು ಗುಣಪಡಿಸದ ಕೆಲವೊಂದು ರೋಗಗಳನ್ನು ದೇವರ ಆಶೀರ್ವಾದದಿಂದ ದೂರವಾಗುತ್ತವೆ ಎನ್ನುವ ನಂಬಿಕೆ ಭಕ್ತರದ್ದು ಇಂತಹ ಯಜ್ಞ ಹೋಮಗಳಿಂದ ರೋಗಗಳು ನಿಯಂತ್ರಣವಾಗಿ ರೈತರು ನೆಮ್ಮದಿಯಿಂದ ಜೀವನ ಸಾಗಿಸುವಂತೆ ಭಗವಂತ ಆಶೀರ್ವದಿಸಲಿ ಎಂದರು.ಮುಖ್ಯ ಅತಿಥಿಗಳಾದ ಬೇಡ್ಕಣಿ ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ ಎನ್ ನಾಯ್ಕ್ ಮಾತನಾಡಿ ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಹಜ, ಈ ರೋಗದಿಂದ ಕೇವಲ ಅಡಿಕೆ ಬೆಳೆಗಾರರಿಗೆ ಅಷ್ಟೇ ಅಲ್ಲದೆ ಮಾನವ ಕುಲಕ್ಕೆ ಸಂಕಷ್ಟ ಎದುರಾಗಿದೆ, ವಿಜ್ಞಾನಿ ಸರಕಾರ ಇಲಾಖೆ ಔಷಧಿ ಕಂಡು ಹಿಡಿಯದೆ ಇರುವುದರಿಂದ ದೇವರ ಮೊರೆ ಹೋಗುವುದಕ್ಕೆ ಜನ ಮುಂದಾಗಿದ್ದಾರೆ.

ಯಜ್ಞ ಯಾಗದಿಂದ ವಾತಾವರಣ ಶುದ್ಧವಾಗುತ್ತದೆ ಇದರಿಂದ ರೋಗ ದೂರ ಆಗುತ್ತದೆ. ಉಳ್ಳವರು ಬಡವರು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋದಾಗ ಜೀವನ ಸಾರ್ಥಕವಾಗುತ್ತದೆ ಎಂದರು. ಸಾಮಾಜಿಕ ಮುಖಂಡ ದಿವಾಕರ ನಾಯ್ಕ್ ಹೆಮ್ಮನಬೈಲ್ ಮಾತನಾಡಿ ಎಲ್ಲವೂ ನಮಗೆ ಬೇಕು ಎಂದು ಸ್ವಾರ್ಥದ ಬದುಕು ನಡೆಸುವ ಜನರಿರುವಾಗ ರೈತರಿಗೆ ಎದುರಾದ ಸಂಕಷ್ಟ ದೂರವಾಗಲಿ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ, ಮುಂದಿನ ದಿನದಲ್ಲಿ ಈ ಯಜ್ಞದಿಂದ ರೋಗ ನಿವಾರಣೆ ಆಗಲಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ್ ಮನ್ಮನೆ ಮಾತನಾಡಿಗುರಿಯಿಂದ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದಾಗ ನಮ್ಮ ಸಂಕಲ್ಪ ನೆರವೇರುತ್ತದೆ, ಮನುಷ್ಯನಿಗೆ ಸಂಸ್ಕಾರ, ಸಂಸ್ಕೃತಿ, ವಿದ್ಯೆ ಬಹಳ ಮುಖ್ಯ, ಶ್ರದ್ಧೆಯಿಂದ ದೇವರ ಕಾರ್ಯ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ, ದೇವರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಮುಂದಿನ ದಿನದಲ್ಲಿ ಎಲ್ಲ ಕಷ್ಟಗಳು ದೂರವಾಗಲಿ ಎಂದರು.ದೇವಾಲಯದ ಅಧ್ಯಕ್ಷ ಮಂಜುನಾಥ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಶ್ವನಾಥ ಭಟ್ ಗೋಳಿಕೈ, ಡಿ ಕೆ ನಾಯ್ಕ್ ತೆಂಗಿನಮನೆ, ಸಿ ಆರ್ ನಾಯ್ಕ್, ಬೇಡ್ಕಣಿ ಸೊಸೈಟಿ ಅಧ್ಯಕ್ಷ ಪ್ರಶಾಂತ ನಾಯ್ಕ್ ಕುಂಬ್ರಿಗದ್ದೆ, ಸ್ಕೌಟ್ಸ್ ಅಧ್ಯಕ್ಷ ವೆಂಕಟೇಶ ನಾಯ್ಕ್ ಮತ್ತಿತರರು ಮಾತನಾಡಿದರು.ಕಮಿಟಿ ಅಧ್ಯಕ್ಷ ರಾಮಕೃಷ್ಣ ನಾಯ್ಕ್ ವಂದನೆ ಸ್ವಾಗತಿಸಿದರು. ಗುರು ನಾಯ್ಕ್ ನಿರ್ವಹಿಸಿದರು.ಬುಧವಾರ ಮತ್ತು ಗುರುವಾರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು, ಗುರುವಾರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.

Edited By : PublicNext Desk
Kshetra Samachara

Kshetra Samachara

23/04/2026 07:56 pm

Cinque Terre

5.02 K

Cinque Terre

0

ಸಂಬಂಧಿತ ಸುದ್ದಿ