ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆಗೆ ಬಂತು ಬಿಸಿಲ ಧಗೆಯಿಂದ ಮುಕ್ತಿ: ವಿಶೇಷ ಹೀಟ್ ಸ್ಟ್ರೋಕ್ ವಾರ್ಡ್!

ಚಾಮರಾಜನಗರ : ರಾಜ್ಯಾದ್ಯಂತ ಹೆಚ್ಚಿದ ತಾಪಮಾನ ಹಿನ್ನೆಲೆಯಲ್ಲಿ ಎಚ್ಚೆತ್ತ ಆರೋಗ್ಯ ಇಲಾಖೆ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಹಾಗೂ ಹೀಟ್ ಸ್ಟ್ರೋಕ್ ಮ್ಯಾನೇಜ್ಮೆಂಟ್ ನಿರ್ಮಾಣ ಮಾಡಿದೆ.

15 ಬೆಡ್ ಗಳನ್ನು ಹೀಟ್ ಸ್ಟ್ರೋಕ್ ವಾರ್ಡ್ ಗೆ ಮೀಸಲು ಇಡಲಾಗಿದೆ. ಗುಂಡ್ಲುಪೇಟೆ ಕೇರಳ ಹಾಗೂ ತಮಿಳುನಾಡು ಗಡಿ ಹಂಚಿಕೊಂಡಿದೆ. ಈಗಾಗಲೇ ಚಾಮರಾಜನಗರದಾದ್ಯಂತ 37 ಡಿಗ್ರಿಗೂ ಅಧಿಕ ತಾಪಮಾನದಿಂದ ಕೂಡಿದೆ. ಇದರಿಂದ ಎಚ್ಚೆತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶೇಷ ವಾರ್ಡ್ ನಿರ್ಮಾಣ ಮಾಡಿ ನಿರ್ಜಲೀಕರಣದಿಂದ ಬಳಲುತ್ತಿರುವವರಿಗೆ ಇಲ್ಲಿ ಚಿಕಿತ್ಸೆ ನೀಡಲು ಕ್ರಮಕೈಗೊಂಡಿದೆ.

ದಿನ ಕಳೆದಂತೆ ಹೆಚ್ಚುತ್ತಿರುವ ತಾಪಮಾನ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಪ್ರತಿ ತಾಲೂಕಿನಲ್ಲೂ ವಿಶೇಷ ಹೀಟ್ ಸ್ಟ್ರೋಕ್ ವಾರ್ಡ್ ನಿರ್ಮಾಣಕ್ಕೆ ಚಿಂತನೆ ನಡೆಸಿದೆ.

Edited By : PublicNext Desk
Kshetra Samachara

Kshetra Samachara

25/04/2026 06:18 pm

Cinque Terre

540

Cinque Terre

0

ಸಂಬಂಧಿತ ಸುದ್ದಿ