ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ವಲಯವಾರು ಅರಣ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರು ಕೈಬರಹದ ಪಟ್ಟಿ ಸಿದ್ಧಪಡಿಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಎಪಿಸಿಸಿಎಫ್ ಅವರಿಗೆ ಪತ್ರ ಬರೆಯಲಾಗಿದೆ.
ಘಟನಾ ವಿವರ : ಬಂಡೀಪುರದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಸ್ಥಳಕ್ಕೆ ಇಂತಹವರನ್ನೇ ನಿಯುಕ್ತಿಗೊಳಿಸುವಂತೆ ಹಾಗೂ ಯಥಾ ಸ್ಥಿತಿ ಮುಂದುವರಿಯುವ ಅಧಿಕಾರಿಗಳ ಹೆಸರಿನ ಜತೆಗೆ ಜ್ಯೇಷ್ಠತಾ ಪಟ್ಟಿ ತಯಾರಿಸಿ ರಾಜಕಾರಣಿಗಳ ಆಪ್ತರೊಬ್ಬರಿಗೆ ರವಾನಿಸಿ ಲಾಭಿ ನಡೆಸಿದ್ದಾರೆ ಎಂಬ ಆರೋಪಕ್ಕೆ ಪುರಾವೆ ಎಂಬಂತೆ ಕೈಬರಹದ ಪಟ್ಟಿ ವಾಟ್ಸಾಪ್ ಗ್ರೂಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಲಾಗಿತ್ತು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಡಳಿತ ವ್ಯವಸ್ಥೆಗೆ ಮಾರಕವಾಗುವಂತೆ ನಡೆದುಕೊಂಡಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ವರ್ಗಾವಣೆ, ನೇಮಕಾತಿಯನ್ನ ಕೇವಲ ಕೈಬರವಣಿಗೆಯಲ್ಲಿ ಸಿದ್ಧಪಡಿಸಿ ಪ್ರಭಾವಿಗಳ ಮುಖೇನ ಲಾಭಿ ನಡೆಸಲು ಮುಂದಾದ ಅಧಿಕಾರಿಯ ನಡೆಗೆ ಸರ್ಕಾರವೇ ಉತ್ತರಿಸಬೇಕಿದೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
06/05/2026 01:19 pm
LOADING...