ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಮೋಟಾರ್ ಕಳ್ಳರ ಅಟ್ಟಹಾಸಕ್ಕೆ ಬ್ರೇಕ್: ರಾಮಾಪುರದಲ್ಲಿ ಮೂವರ ಬಂಧನ

ಚಾಮರಾಜನಗರ : ರಾಮಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಜಮೀನುಗಳಲ್ಲಿ ಪಂಪ್ ಸೆಟ್ ಮೋಟಾ‌ರ್, ಸೋಲಾ‌ರ್ ಬ್ಯಾಟರಿ ಸೇರಿ ಕೃಷಿ ಪರಿಕರ ಕದಿಯುತ್ತಿದ್ದ ಮಾರಸ್ವಾಮಿ, ಮಣಿಕಂಠ, ಶ್ರೀರಂಗ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಚಂಗಾದಾರಹಳ್ಳಿ ಗ್ರಾಮದ ಮಣಿ ಎಂಬವರ ಜಮೀನಿನಲ್ಲಿ ಎರಡು ಸಬ್ ಮರ್ಸಿಬಲ್ ಮೋಟಾರ್ ಕದ್ದಿದ್ದ ಪ್ರಕರಣದಲ್ಲಿ ಈ ಬಂಧನ ನಡೆದಿದೆ. ಬಂಧಿತರಿಂದ ಎರಡು ಮೋಟಾರ್, ಸೋಲಾ‌ರ್ ಬ್ಯಾಟರಿ, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ ಸೇರಿದಂತೆ ಒಟ್ಟಾರೆ 2.18 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳಲಾಗಿದೆ.

Edited By : PublicNext Desk
Kshetra Samachara

Kshetra Samachara

05/05/2026 07:31 pm

Cinque Terre

140

Cinque Terre

0

ಸಂಬಂಧಿತ ಸುದ್ದಿ