ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ : ಇಬ್ಬರು ಮನೆಗಳ್ಳರ ಬಂಧನ.. ಚಿನ್ನಾಭರಣ, ಬೈಕ್‌ಗಳ ವಶ

ಗುಂಡ್ಲುಪೇಟೆ : ಪಟ್ಟಣದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನ ಭೇದಿಸಿದ ಗುಂಡ್ಲುಪೇಟೆ ಪೊಲೀಸರು ಕಳುವಾಗಿರುವ ಚಿನ್ನಾಭರಣ ಮತ್ತು ಎರಡು ದ್ವಿಚಕ್ರ ವಾಹನಗಳ ಸಮೇತ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ಪಟ್ಟಣದ ಮಹದೇವಪ್ಪ ಎಂಬವರ ಮನೆಗೆ ಕನ್ನಹಾಕಿದ್ದ ಖದೀಮರು ಬೀರುವಿನಲ್ಲಿದ್ದ 25 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳ ಜೊತೆಗೆ 52 ಸಾವಿರ ರೂ ನಗದು ಎಗರಿಸಿ ಪರಾರಿಯಾಗಿದ್ದರು, ಈ ಕುರಿತಾಗಿ ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಬೆನ್ನತ್ತಿದ ಪೊಲೀಸರು ಮಾಡ್ರಹಳ್ಳಿ ಗ್ರಾಮದ ಶಿವಸ್ವಾಮಿ ಅಲಿಯಾಸ್ ಪುನೀತ್ ಹಾಗೂ ಚಂದ್ರು ಎಂಬವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಚಿನ್ನಾಭರಣ ಹಾಗೂ ಎರಡು ದ್ವಿಚಕ್ರವಾಹನಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಪಿಐ ಜಯಕುಮಾರ್, ಸಬ್ ಇನ್ಸ್‌ಪೆಕ್ಟರ್ ನರೇಶ್ ಕುಮಾರ್, ಮುಖ್ಯಪೇದೆ ಶಿವರಾಜು, ಬಂಟಪ್ಪ, ಕಿಶೋರ್, ಶಿವರಾಮು, ಮಹೇಶ್ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ

Edited By : Nirmala Aralikatti
Kshetra Samachara

Kshetra Samachara

30/04/2026 02:27 pm

Cinque Terre

160

Cinque Terre

0

ಸಂಬಂಧಿತ ಸುದ್ದಿ