ಗುಂಡ್ಲುಪೇಟೆ : ಪಟ್ಟಣ ಪುರಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣ ಕುಡುಕರ ಅಡ್ಡೆಯಾಗಿ ಬದಲಾಗಿದ್ದು ಸಂಜೆಯಾಗುತ್ತಿದ್ದಂತೆ ಮದ್ಯದೊಂದಿಗೆ ಕಟ್ಟಡದ ಮೇಲ್ಭಾಗದಲ್ಲಿ ಕೂರುವ ವ್ಯಸನಿಗಳು ಕುಡಿದು ಅಲ್ಲಿಯೇ ಬಿಸಾಡುತ್ತಿದ್ದು ರಾಶಿ ರಾಶಿ ಬಿಯರ್ ಬಾಟಲಿಗಳನ್ನ ನೋಡಿದ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಕಾರ್ಯಕರ್ತರು ಮಳಿಗೆಗಳ ರಕ್ಷಣೆಗೆ ಮುಂದಾಗುವಂತೆ ಒತ್ತಾಯಿಸಿ ಪುರಸಭಾ ಮುಖ್ಯಾಧಿಕಾರಿ ಸರವಣ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಕಟ್ಟಡಕ್ಕೆ ಸೂಕ್ತ ಭದ್ರತೆಯಿಲ್ಲದ ಹಿನ್ನೆಲೆ ಕುಡುಕರು ಅಡ್ಡೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ, ಅಂಗಡಿ ಮಳಿಗೆಗಳನ್ನ ಬಾಡಿಗೆಗೆ ನೀಡಿರುವ ಪುರಸಭೆ ಆಡಳಿತ ಮಂಡಳಿ ರಕ್ಷಣೆಗೂ ಒತ್ತು ನೀಡಬೇಕು ಎಂದು ಸಂಘಟನೆ ಯುವ ಘಟಕ ಜಿಲ್ಲಾಧ್ಯಕ್ಷ ರಂಗಪ್ಪನಾಯಕ್ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಿಓ ಸರವಣ ವಾಣಿಜ್ಯ ಸಂಕೀರ್ಣದ ಮೇಲ್ಭಾಗಕ್ಕೆ ತೆರಳಲು ಅವಕಾಶವಿರುವ ಗೇಟ್ ಬಂದ್ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
PublicNext
30/04/2026 07:28 am
LOADING...