ಚಾಮರಾಜನಗರ : ಕನ್ನಡ ನಾಡು-ನುಡಿಗೆ ಡಾ.ರಾಜ್‌ಕುಮಾರ್ ಅವರ ಕೊಡುಗೆ ಅವಿಸ್ಮರಣೀಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವರನಟ ಡಾ.ರಾಜ್ ಕುಮಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ರಾಜ್ ಕುಮಾರ್ ಅವರು ನಮ್ಮ ಜಿಲ್ಲೆಯವರು ಎಂಬುದೇ ಹೆಮ್ಮೆಯ ವಿಚಾರ. 1929ರಲ್ಲಿ ದೊಡ್ಡಗಾಜನೂರಿನಲ್ಲಿ ಜನಿಸಿದ ಅವರು ರಂಗಭೂಮಿ ಕಲಾವಿದರಾಗಿ ಬಳಿಕ 1956ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸಿನಿಮಾ ಖ್ಯಾತಿ ಪಡೆದರು ಎಂದರು.
ಡಾ.ರಾಜ್ ಕುಮಾರ್ ಅವರು ಕನ್ನಡ ಭಾಷೆಯಲ್ಲಿ ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿಯೂ ಅಭಿನಯಿಸದಿರುವುದು ವಿಶೇಷ. ಕನ್ನಡ ನಾಡು ನುಡಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೈಸೂರು ವಿವಿಯಿಂದ ಡಾಕ್ಟರೇಟ್ ಪಡೆದು ಡಾ.ರಾಜ್ ಕುಮಾರ್ ಅವರು ಖ್ಯಾತ ನಟ ಹಾಗೂ ಗಾಯಕರೂ ಆಗಿದ್ದರು ಎಂದು ತಿಳಿಸಿದರು.
ಚಲನಚಿತ್ರ ನಿರ್ದೇಶಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ ರಾಜ್ ಮೇಹು ಮಾತಮಾಡಿ,ಡಾ.ರಾಜ್ ಕುಮಾರ್ ಅವರು ಕನ್ನಡಿಗರ ಅಸ್ಮಿತೆಯ ಸಂಕೇತ. ಜಗತ್ತಿನಲ್ಲಿ ಸಾವಿರಾರು ಶ್ರೇಷ್ಟ ನಟರಿದ್ದಾರೆ. ಅದರಂತೆ ಕರ್ನಾಟಕದಲ್ಲಿಯೂ ಬಹಳಷ್ಟ ನಟರಿದ್ದಾರೆ. ಡಾ.ರಾಜ್ ಕುಮಾರ್ ಎಲ್ಲ ಕಲಾವಿದರ ನಡುವೆ ವಿಶಿಷ್ಟವಾಗಿದ್ದಾರೆ. ಕುವೆಂಪು ಹಾಗೂ ಡಾ.ರಾಜ್ ಕುಮಾರ್ ಅವರು ಕನ್ನಡ ನಾಡಿನ ಆಸ್ಮಿತೆಗಳು. ಹಲವು ತತ್ವ ಸಿದ್ದಾಂತಗಳನ್ನು ತಮ್ಮ ಚಿತ್ರಗಳ ಮೂಲಕ ಬಿತ್ತಿ ಬೆಳೆಸಿದರು ಎಂದರು.
ಡಾ.ರಾಜ್ ಕುಮಾರ್ ಅವರು ಇತಿಹಾಸ ಪುರುಷರ ಪಾತ್ರ ಮಾಡಿದರು. ರಾಜ ಮಹಾ ರಾಜರನ್ನು ಡಾ.ರಾಜ್ ಮೂಲಕ ನೋಡಿದ್ದೇ ವೆ. ಕಲೆ, ಸಂಸ್ಕೃತಿ, ಪುರಾಣಗಳನ್ನು ಡಾ.ರಾಜ್ ಚಿತ್ರದ ಮೂಲಕ ಕಲಿತಿದ್ದೇವೆ. ಡಾ.ರಾಜ್ ಕುಮಾರ್ ಅವರು ಸಮುದಾಯದ ಪಾತ್ರಗಳನ್ನು ಕೂಡ ಮಾಡಿದ್ದಾರೆ ಎಂದು ತಿಳಿಸಿದರು.
Kshetra Samachara
24/04/2026 06:00 pm