ಗುಂಡ್ಲುಪೇಟೆ : ಪಟ್ಟಣದ ಹೊರವಲಯದಲ್ಲಿನ ಗುಮ್ಮಕಲ್ಲು ಗುಡ್ಡದ ಕ್ವಾರಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ, ಬುಧವಾರ ಸ್ನೇಹಿತರೊಟ್ಟಿಗೆ ತೆರಳಿದ್ದ ಮಲ್ಲಯ್ಯನಪುರ ಗ್ರಾಮದ ಯುವಕ ಮೃತಪಟ್ಟಿದ್ದಾನೆ.
ಮಲ್ಲಯ್ಯನಪುರ ಗ್ರಾಮದ ನಿಶಾಂತ್ ( 20 ) ಮೃತ ದುರ್ದೈವಿಯಾಗಿದ್ದು ಕ್ವಾರಿಯ ಆಳವನ್ನರಿಯದೆ ಉಸಿರು ಚೆಲ್ಲಿದ್ದಾನೆ, ಮಧ್ಯಾಹ್ನ ಕ್ವಾರಿ ಸಮೀಪ ಬೈಕ್ ನಿಂತಿರುವುದನ್ನ ಗಮನಿಸಿದ ದನಗಾಹಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ, ಸದ್ಯ ಯುವಕನ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದ್ದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.
PublicNext
30/04/2026 08:15 am
LOADING...