ಚಾಮರಾಜನಗರ: ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆ ಆನೆಗಳ ಅಪೂರ್ವ ಆವಾಸ ಸ್ಥಾನ, ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳು, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳು ಗಜಪಡೆಯ ನೆಚ್ಚಿನ ತಾಣವಾಗಿವೆ.
ಈ ಕಾಡುಗಳಲ್ಲಿ ಬೇಸಿಗೆ ತಾಪಮಾನಕ್ಕೆ ನೀರು ಕಡಿಮೆಯಾಗುತ್ತಿದ್ದಂತೆಯೇ ಆನೆಗಳ ಪರಿತಾಪ ಹೆಚ್ಚಾಗುತ್ತಿದೆ.
ಸದ್ಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಸುತ್ತಮುತ್ತ ಜೀವಜಲಕ್ಕಾಗಿ ಆನೆಗಳು ಅಲೆದಾಡುತ್ತಿವೆ. ಕಾಡಿನೊಳಗೆ ನಿರ್ಮಾಣ ಮಾಡಿರುವ ತೊಟ್ಟಿಗಳಿಗೆ ಇಲಾಖೆಯಿಂದ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ಆನೆಗಳು ಜಲಮೂಲ ಹುಡುಕಿಕೊಂಡು ವಲಸೆ ಹೋಗುವ ಪ್ರಾಣಿಗಳು. ಹೀಗಾಗಿ ಇವುಗಳು ನೀರಿಗಾಗಿ ಅಲೆದಾಡುವುದಕ್ಕೆ ಶುರು ಮಾಡಿವೆ. ಬತ್ತಿರುವ ನದಿಯ ಹಳ್ಳದಲ್ಲಿ ನಿಂತ ನೀರು, ಕೆರೆಗಳಲ್ಲಿ ಬಿರುಕು ಬಿಟ್ಟ ನೆಲದ ಒಡಲಿನಲ್ಲಿ ಸಿಗುವ ಜಲದ ಪಸೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಬಾಯಾರಿಕೆ ತಣಿಸುತ್ತಿದೆ.
PublicNext
28/04/2026 08:55 am
LOADING...