ಗುಂಡ್ಲುಪೇಟೆ : ನೀಲಗಿರಿ ಜಿಲ್ಲೆಯ ಮಸಿನಗುಡಿ ಸಮೀಪ, ಭಾರಿ ಗಾತ್ರದ ಹೆಬ್ಬುಲಿಯೊಂದು ರಸ್ತೆಯನ್ನು ದಾಟುತ್ತಿದ್ದ ದೃಶ್ಯವನ್ನು ಕಂಡ ವಾಹನ ಸವಾರರು ಆಘಾತಕ್ಕೊಳಗಾಗಿದ್ದಾರೆ.
ಗಿರಿಧಾಮಗಳ ನಡುವೆ ಇರುವ ಮಸಿನಗುಡಿ ಪ್ರದೇಶದಲ್ಲಿ ಹುಲಿ ಮತ್ತು ಚಿರತೆಗಳು ಆಗಾಗ್ಗೆ ರಸ್ತೆಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಮುದುಮಲೈ ರಾಷ್ಟ್ರೀಯ ಉದ್ಯಾನವನಕ್ಕೆ ಜೀಪ್ ಸಫಾರಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ರಸ್ತೆ ಬದಿಯಲ್ಲೇ ಕಾಣಿಸಿಕೊಳ್ಳುವ ಹುಲಿ, ಚಿರತೆಗಳನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆಯೂ ಏರಿಕೆ ಕಂಡಿದೆ.
Kshetra Samachara
26/04/2026 05:17 pm
LOADING...