ಚಾಮರಾಜನಗರ : ಕರಿಕಲ್ಲು ಕ್ವಾರಿಯೊಂದರಲ್ಲಿ ಟಿಪ್ಪರ್ ಮುಗುಚಿಕೊಂಡು ಚಾಲಕ ಮೃತಪಟ್ಟ ದುರ್ಘಟನೆ ತಾಲೂಕಿನ ಕುರುಬರಹುಂಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ತಾಲೂಕಿನ ಅಮ್ಮನಪುರ ಗ್ರಾಮದ ಶಿವಕುಮಾರ್ (45) ಮೃತಪಟ್ಟ ದುರ್ದೈವಿ. ವಿಷಯ ತಿಳಿದು ಸ್ಥಳಕ್ಕೆ ಪೂರ್ವ ಠಾಣೆಯ ಪೊಲೀಸರು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಘಟನಾಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ವಾಹನದ ಬ್ರೇಕ್ ವೈಫಲ್ಯದಿಂದ ಅವಘಡ ಸಂಭವಿಸರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮೃತದೇಹವನ್ನು ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು, ಈ ಘಟನೆ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಸಂಬಂಧ ಕ್ವಾರಿಯ ಮಾಲೀಕ. ಮ್ಯಾನೇಜರ್ ಸೇರಿದಂತೆ ಐವರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಲ್ಲದೇ ಇದೇ ರೀತಿ ಗುಂಡ್ಲುಪೇಟೆ ತಾಲೂಕಿನಲ್ಲೂ ಸಂಭವಿಸಿದ ಘಟನೆಯಲ್ಲೂ ಸಹ ಆ ಕ್ವಾರಿಯ ಮಾಲೀಕರು ಸೇರಿ ಐವರ ಮೇಲೆ ಪ್ರಕರಣ
ದಾಖಲಾಗಿದ್ದು, ಈ ಎರಡು ಘಟನೆಗಳ ಸಂಬಂಧ ಕೂಲಂಕುಷವಾಗಿ ಪರಿಶೀಲನೆ ನಡೆಸುವಂತೆ ಗಣಿ ಸುರಕ್ಷತಾ ಮಹಾ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ತಿಳಿಸಿದರು.
Kshetra Samachara
29/04/2026 04:29 pm
LOADING...