ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ: ತಾಯಿ ಮಗಳ ಬಲಿ ಪಡೆದ ಟಿಪ್ಪರ್ - ಭುಗಿಲೆದ್ದ ಆಕ್ರೋಶ

ಗುಂಡ್ಲುಪೇಟೆ : ಟಿಪ್ಪರ್ ಆರ್ಭಟಕ್ಕೆ ಕೇರಳದ ಕಣ್ಣೂರಿನ ಇಬ್ಬರು ದಾರುಣವಾಗಿ ಸಾವಿಗೀಡಾದ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿದೆ. ಅಪಘಾತದ ಸ್ಥಳದಲ್ಲಿ ಪೊಲೀಸರ ಜೊತೆಗೆ ಮಾತಿನ ಚಕಮಕಿಗಿಳಿದ ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಅವ್ಯಾಹತವಾಗಿ ಖನಿಜ ಸಂಪತ್ತು ಸಾಗಿಸುವ ಭರದಲ್ಲಿ ಸಾರ್ವಜನಿಕರ ಜೀವವನ್ನೇ ಬಲಿ ಪಡೆಯುತ್ತಿರುವ ಕೇರಳಿಗರಿಗೆ ಸ್ಥಳೀಯ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದ ಸ್ಥಳದಲ್ಲಿದ್ದವರು ಧಿಕ್ಕಾರದ ಘೋಷಣೆಗಳನ್ನ ಕೂಗುವ ಮೂಲಕ ಕಿಡಿಕಾರಿದರು.ಯಮಸ್ವರೂಪಿ ಟಿಪ್ಪರ್ ಗೆ ಬಲಿಯಾದವರು ಕಣ್ಣೂರಿನ ನಿವಾಸಿಗಳಾದ ಆಯಿಷಾ ನೂರ್ ( 42) ಹಾಗೂ ಪುತ್ರಿ ನುಹಾ (18) ಸಹೋದರ ಮಹಮದ್ ಅಜೀರ್ ಗೆ ಕೈ ಕಾಲುಗಳು ಮುರಿತವಾಗಿದ್ದು ಮಗ ನಮಿಯಾನ್ (09) ಜೀವನ್ಮರಣ ಹೋರಾಟದಲ್ಲಿ ಇರುವುದಾಗಿ ಕುಟುಂಬದವರು ಮಾಹಿತಿ ನೀಡಿದ್ದಾರೆ.

ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ

Edited By : Shivu K
PublicNext

PublicNext

14/04/2026 05:13 pm

Cinque Terre

12.92 K

Cinque Terre

0

ಸಂಬಂಧಿತ ಸುದ್ದಿ