ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಲರ್ ಟಿಪ್ಪರ್ ಡಿಕ್ಕಿ ಪ್ರಕರಣ : ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ ಬಾಲಕ

ಗುಂಡ್ಲುಪೇಟೆ : ತಾಲ್ಲೂಕಿನ ಮಲ್ಲಯ್ಯನಪುರ ಗೇಟ್ ಸಮೀಪ ಮಂಗಳವಾರ ಸಂಭವಿಸಿದ್ದ ಭೀಕರ ಅಪಘಾತ ಪ್ರಕರಣ ಸಂಬಂಧ ಪೆಟ್ಟಿಗೊಳಗಾಗಿದ್ದ ಬಾಲಕ ನಹಿಯಾನ್ ( 09) ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲೇ ಉಸಿರು ಚೆಲ್ಲಿದ್ದಾನೆ.

ಮಂಗಳವಾರ ಯಮಸ್ವರೂಪಿ ಟಿಪ್ಪರ್ ಆರ್ಭಟಕ್ಕೆ ಸ್ಥಳದಲ್ಲೇ ತಾಯಿ ಆಯಿಷಾ ನೂರಿ ( 41) ಹಾಗೂ ಸಹೋದರಿ ನುಹಾ ಅಬಾರ್ಕರ್ ( 18 ) ಸಾವನ್ನಪ್ಪಿದರು ತೀವ್ರವಾಗಿ ಗಾಯಗೊಂಡಿದ್ದ ಸೋದರ ಮಾವ ಮಹಮ್ಮದ್ ಅಜೀರ್ ಇಬ್ಬರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಮಹಮ್ಮದ್ ಅಜೀರ್ ಕೊನೆಯುಸಿರೆಳೆದಿದ್ದರು. ಕುಟುಂಬದ ಮೂವರು ಇಹಲೋಕ ತ್ಯಜಿಸಿದ ಕೆಲವೇ ಗಂಟೆಗಳಲ್ಲಿ ಬಾಲಕ ಸಾವನ್ನಪ್ಪಿದ್ದು ಎಂಸ್ಯಾನ್ಡ್ ಮಾಫಿಯಾ ಹೊಡೆತಕ್ಕೆ ಅಮಾಯಕ ನಾಲ್ಕು ಜೀವಗಳು ಬಲಿಯಾಗಿ ಹೋಗಿವೆ. ಘಟನಾ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Edited By : Nirmala Aralikatti
PublicNext

PublicNext

16/04/2026 10:30 am

Cinque Terre

6.36 K

Cinque Terre

0

ಸಂಬಂಧಿತ ಸುದ್ದಿ