ಚಾಮರಾಜನಗರ : ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವನ್ಯಜೀವಿ ವಲಯದ ಅಟ್ಟಗೂಳಿಪುರ ಗಸ್ತಿನ ಕೆಂಪಯ್ಯನಕಟ್ಟೆ ಬಳಿ ಉರುಳಿಗೆ ಸಿಲುಕಿ ಒಂದು ಹೆಣ್ಣು ಜಿಂಕೆ ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಂಗಸಂದ್ರ(ಬೂದಿಪಡಗ) ಗ್ರಾಮದ ಸುರೇಶ್ (45) ಬಂಧಿತ ಆರೋಪಿ. ಈತ ಅರಣ್ಯ ಪ್ರದೇಶದೊಳಗೆ ಪ್ರಾಣಿಗಳನ್ನು ಆಕ್ರಮವಾಗಿ ಬೇಟೆಯಾಡಲು ಹಾಕಿದ್ದ ಉರುಳಿಗೆ ಜಿಂಕೆಯೊಂದು ಸಿಲುಕಿ ಮೃತಪಟ್ಟಿತ್ತು. ಈ ಘಟನೆ ಸಂಬಂಧ ಅರಣ್ಯ ಇಲಾಖೆ ಶ್ವಾನದಳದೊಂದಿಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
29/04/2026 04:27 pm
LOADING...