ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರದಲ್ಲಿ ಅಮಾನವೀಯ ಘಟನೆ: ಸೋಲಿಗ ದಂಪತಿ ಮೇಲೆ ಹಲ್ಲೆ, ಆಸ್ಪತ್ರೆಯ ನಿರ್ಲಕ್ಷ್ಯ!

ಚಾಮರಾಜನಗರ : ಕ್ಷುಲ್ಲಕ ವಿಚಾರಕ್ಕಾಗಿ ಸೋಲಿಗ ಜನಾಂಗದ ದಂಪತಿ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕೆ.ಗುಡಿ ವ್ಯಾಪ್ತಿಯ ಕನ್ನಾರೆ ಕಾಲೋನಿ ನಿವಾಸಿಗಳಾದ ಪುಟ್ಟರಂಗ ಹಾಗೂ ಇವರ ಪತ್ನಿ ವಿಜಿ ಇವರು ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಮಗಳನ್ನು ನೋಡಲು ತಮ್ಮ ಗ್ರಾಮದಿಂದ ನಾಗವಳ್ಳಿಗೆ ಬಂದು ಇಳಿದಾಗ ನಲ್ಲೂರು ಗ್ರಾಮದ ಪರಮೇಶ್ ಹಾಗೂ ವೀರಭದ್ರ ಎಂಬವರು ಏಕಾಏಕಿ ಪುಟ್ಟರಂಗ ಅವರ ಮೇಲೆ ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ಹಲ್ಲೆಯನ್ನು ತಡೆಯಲು ಹೋದ ಅವರ ಪತ್ನಿ ವಿಜಿ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಪತ್ನಿ ವಿಜಿ ಆರೋಪಿಸಿದ್ದಾರೆ.

ಅಲ್ಲದೆ ತಮ್ಮ ಪತಿಯನ್ನು ಯಡಪುರದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ರಾತ್ರಿ ಉಳಿಯಲು ಅವಕಾಶ ನೀಡದೆ ನಿಮಗೆ ಏನೂ ತೊಂದರೆ ಇಲ್ಲವೆಂದು ಕಳಿಸಿರುತ್ತಾರೆ. ಇದರಿಂದ ಮನನೊಂದ ದಂಪತಿಗಳು ಯಡಪುರದ ಬಸ್ ನಿಲ್ದಾಣದಲ್ಲಿ ರಾತ್ರಿ ಪೂರ್ತಿ ಅಲ್ಲಿಯೇ ಉಳಿದು ನಂತರ ಬೆಳಗ್ಗೆ ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಗೆ ತೆರಳಿ ತಮ್ಮ ಮೇಲೆ ಹಲ್ಲೆ ನಡೆದಿದೆ, ಹಲ್ಲೆ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರು ನೀಡಿರುತ್ತಾರೆ.

Edited By : PublicNext Desk
Kshetra Samachara

Kshetra Samachara

13/04/2026 06:21 pm

Cinque Terre

620

Cinque Terre

0

ಸಂಬಂಧಿತ ಸುದ್ದಿ