ಗುಂಡ್ಲುಪೇಟೆ : ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಬಾಲಕ ನೀರಿನ ಟ್ಯಾಂಕ್ ಏರಿ ಆತಂಕ ಸೃಷ್ಟಿಸಿದ್ದ ಘಟನೆ ಪಟ್ಟಣದ ನಾಗರತ್ನಮ್ಮ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದಿದೆ.
ಸೀನಾ ( 15) ಎಂಬ ಬಾಲಕ ಟ್ಯಾಂಕ್ ಏರಿ ಆತಂಕ ಸೃಷ್ಟಿಸಿದವನಾಗಿದ್ದು ಮನೆಯವರು ಬೈದ ವಿಚಾರಕ್ಕೆ ಮನನೊಂದು ಸಂಜೆ 7.30 ರಲ್ಲಿ ಟ್ಯಾಂಕ್ ಏರಿದ ಭೂಪ ರಾತ್ರಿ 10 ರ ತನಕ ಕೆಳಗಿಳಿಯದೆ ಹಠ ಹಿಡಿದ ಹಿನ್ನೆಲೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಯುವಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಳಗಿಳಿದ ಬಾಲಕನನ್ನ ಪೊಲೀಸ್ ಠಾಣೆಗೆ ಕರೆದೊಯ್ದು ಬುದ್ಧಿವಾದ ಹೇಳಿ ವಾಪಸ್ ಮನೆಗೆ ಕಳುಹಿಸಿರುವ ಪೊಲೀಸರು ಎಚ್ಚರವಹಿಸುವಂತೆ ಪೋಷಕರಿಗೆ ಸೂಚಿಸಿದ್ದಾರೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
17/04/2026 10:53 am
LOADING...