ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೊರುಕನ ಪುಟ ವಿನ್ಯಾಸಕ ಮಹದೇವಸ್ವಾಮಿ ಅಕಾಲಿಕ ನಿಧನ 

ಚಾಮರಾಜನಗರ : ಗೊರುಕನ ಪತ್ರಿಕೆಯ ಪುಟ ವಿನ್ಯಾಸಕ ಪಿ.ಮಹದೇವಸ್ವಾಮಿ (33) ಅನಾರೋಗ್ಯದಿಂದ ಭಾನುವಾರ ನಿಧನರಾದರು.

ತಾಲ್ಲೂಕಿನ ಉಡಿಗಾಲ ಗ್ರಾಮದ ವಾಸಿಯಾಗಿದ್ದ ಇವರು ಕಳೆದ 12 ವರ್ಷಗಳಿಂದ ಗೊರುಕನ ಪತ್ರಿಕೆಯ ಪುಟ ವಿನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ತಂದೆ, ತಾಯಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಸ್ವಗ್ರಾಮವಾದ ಉಡಿಗಾಲ ಗ್ರಾಮದಲ್ಲಿ ಸೋಮವಾರ ನೆರವೇರಲಿದೆ. ಮಹದೇವಸ್ವಾಮಿ ಅವರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸದಸ್ಯರು ಸಂತಾಪ ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/05/2026 07:54 pm

Cinque Terre

520

Cinque Terre

0

ಸಂಬಂಧಿತ ಸುದ್ದಿ