ಚಾಮರಾಜನಗರ : ಪಶ್ಚಿಮ ಬಂಗಾಳದ ಗೆಲುವು ಬಿಜೆಪಿ ಗೆಲುವಲ್ಲ - SIR ಗೆಲುವು.ಚುನಾವಣಾ ಆಯೋಗದ ಸಹಾಯದಿಂದ ಮೋದಿ ಗೆದ್ದಿದ್ದಾರೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಗುಂಡ್ಲುಪೇಟೆ ತಾಲೂಕಿನ ತೆರಣಾಂಬಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮತದಾರರನ್ನು ಡಿಲೀಟ್ ಮಾಡಿದ್ದಾರೆ. ಈ ಗೆಲವು ಚುನಾವಣಾ ಆಯೋಗದ ಗೆಲುವು- ಅಧಿಕಾರಿಗಳ ಗೆಲುವು. 50 ರಿಂದ 60 ಸ್ಥಾನಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಇದಕ್ಕೆ ಮೂಲ ಕಾರಣ ಎಸ್ ಐ ಆರ್ (ವಿಶೇಷ ತೀವ್ರ ಪರಿಷ್ಕರಣೆ) ಆಗಿದೆ ಎಂದರು.
90 ಲಕ್ಷ ಟಿಎಂಸಿ ಮತದಾರರನ್ನು ವೋಟರ್ ಲೀಸ್ಟ್ ನಿಂದ ತೆಗೆದು ಹಾಕಲಾಗಿದೆ. ಅವರಾರು ಬಾಂಗ್ಲದೇಶದವರಲ್ಲ. ಕೇಂದ್ರ ಸರ್ಕಾರ ಸ್ವಾಯತಃ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ.
ಚುನಾವಣಾ ಆಯೋಗ,ಐಟಿ, ಇಡಿ, ಸಿಬಿಐ ನ್ಯಾಯಾಂಗ ಸಹ ಬಿಜೆಪಿ ಪರವಿದೆ.
ನ್ಯಾಯಾಂಗದ ಬಗ್ಗೆ ಅನುಮಾನ, ಪಕ್ಷಪಾತದ ಶಂಕೆ ವ್ಯಕ್ತಪಡಿಸಿದ ಅವರು, ಮಾಲೂರು, ಶೃಂಗೇರಿಯಲ್ಲಿ ಸೋತವರು ನ್ಯಾಯಾಲಯಕ್ಕೆ ಹೋಗಿದ್ದರು. ಅವರಿಗೆ ಮಾತ್ರ ಮರು ಮತ ಎಣಿಕೆಗೆ ಅವಕಾಶ ಕೊಟ್ಟರು. ಕಾಂಗ್ರೆಸ್ ನ ಸೌಮ್ಯರೆಡ್ಡಿ ಮತ್ತು ಅಂಜಲಿ ಲಿಂಬಾಳ್ಕರ್ ನ್ಯಾಯಾಲಯಕ್ಕೆ ಅಪೀಲ್ ಗೆ ಹೋಗಿದ್ದರು. ಅವರಿಗೇಕೆ ನ್ಯಾಯಾಲಯ ಮರು ಮತ ಎಣಿಕೆಗೆ ಅವಕಾಶ ನೀಡಿಲ್ಲ.ಇದನೆಲ್ಲಾ ನೋಡಿದರೆ ಅನುಮಾನ ಮೂಡಲಿದೆ ಎಂದರು.
Kshetra Samachara
04/05/2026 07:38 pm
LOADING...